ದಾವಣಗೆರೆ, ಜು. 11 – ಮಹಾನಗರ ಪಾಲಿಕೆ, ಚಾರ್ಲಿ ಎಜುಕೇಷನ್ ಮತ್ತು ವೆಲ್ ಫೇರ್ ಫೌಂಡೇಷನ್ ಮತ್ತು ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರ ಸಂಘ ಹಾಗೂ ಇಟಾಚ್ವೆಂಚ ವತಿಯಿಂದ ಚಿಕನ್ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಚಿಕನ್ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸ್ಥಳೀಯ ಎಲ್ಲಾ ಚಿಕನ್ ತ್ಯಾಜ್ಯ ಸಂಗ್ರಹಣೆಯನ್ನು ವಾಹನದ ಮೂಲಕ ವಿಲೇವಾರಿ ಪಡಿಸಲು ಮಾರಾಟಗಾರರ ಸಂಘ ಮತ್ತು ಎನ್ ಜಿ ಓ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿ, ಸಾರ್ವಜನಿಕರು ಸಹ ತ್ಯಾಜ್ಯ ಸಂಗ್ರಹಿಸುವವರ ಜೊತೆ ಸಹಕರಿಸಬೇಕೆಂದು ಕರೆ ನೀಡಿದರು.
ಮಹಾಪೌರರಾದ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಹಾನಗರ ಪಾಲಿಕೆ ಸದಸ್ಯರಾದ ಸಯೀದ್ ಚಾರ್ಲಿ ಪೈಲ್ವಾನ್, ಜಾಕೀರ್ ಅಲಿ, ಉದಯಕುಮಾರ್, ಕೋಳಿ ಸಂಘದ ಮಾರಾಟಗಾರರ ಅಧ್ಯಕ್ಷ ಷಂಸು ತಬ್ರೇಜ್, ಕಾರ್ಯದರ್ಶಿ ನಿಸ್ಸಾ, ಗೌರವ ಅಧ್ಯಕ್ಷರಾದ ಇಬ್ರಾಹೀಂ ಕೋಳಿ, ವಸೀಂ ಚಾರ್ಲಿ ಮತ್ತಿತರರಿದ್ದರು.