ಲಯನ್ಸ್ ಕ್ಲಬ್ ಕಣ್ಣು ಪರೀಕ್ಷೆ ಸ್ವಾಗತಾರ್ಹ

ಲಯನ್ಸ್ ಕ್ಲಬ್ ಕಣ್ಣು ಪರೀಕ್ಷೆ ಸ್ವಾಗತಾರ್ಹ

ರಾಣೇಬೆನ್ನೂರು, ಜು. 10- ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯದತ್ತ ಗಮನಹರಿಸುವುದು ಕಡಿಮೆಯಾಗುತ್ತಿದೆ. ಲಯನ್ಸ್ ಕ್ಲಬ್ ಆ ದಿಸೆಯಲ್ಲಿ ಇಂತಹ ಉಚಿತ ಶಿಬಿರಗಳ ಮೂಲಕ ಜನರ ಆರೋಗ್ಯದತ್ತ ಗಮನಹರಿಸುವುದು ಸ್ವಾಗತಾರ್ಹವಾದುದು. ಲಯನ್ಸ್ ಸಂಸ್ಥೆ ಇನ್ನು ಹೆಚ್ಚು ಶಿಬಿರಗಳನ್ನು ನಡೆಸಲಿ ಎಂದು  ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಲಯನ್ಸ್, ಇನ್ನರ್ ವ್ಹೀಲ್, ಸ್ವಾಭಿಮಾನಿ ಕನ್ನಡ ಸಂಘ, ಶಂಕರ ಆಸ್ಪತ್ರೆ ಸಂಯುಕ್ತವಾಗಿ  ನಡೆಸಿದ ಕಣ್ಣು ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ಹಾಗೂ ಇತರೆ ಸೇವಾ ಸಂಸ್ಥೆಯವರು ನಡೆಸುವ ಇಂತಹ ಆರೋಗ್ಯ ಶಿಬಿರಗಳಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ಪ್ರಕಾಶ್ ಮನವಿ ಮಾಡಿ ದರು. ನಗರ ಹಾಗೂ ತಾಲ್ಲೂಕಿನ ಗ್ರಾಮಗಳ 360 ಜನರು ಕಣ್ಣು ಪರೀಕ್ಷಿಸಿಕೊಂಡಿದ್ದು,  218 ಜನರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಲಯನ್ಸ್‌ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ತಿಳಿಸಿದರು.  ಶಿಬಿರದಲ್ಲಿ ಕೊಟ್ರೇಶ್ ಎಮ್ಮಿ, ಎಂ.ಎಸ್.ಅರಕೇರಿ, ಲೋಕೇಶ್ ನರಸಗೊಂಡರ, ಬಸವರಾಜ ಬಡಿಗೇರ, ಬಸವರಾಜ ಪಾಟೀಲ, ಅಶೋಕ ಹೊಟ್ಟಿಗೌಡ್ರ, ಎನ್.ಎಸ್. ಕುಲ್ಕರ್ಣಿ ಮತ್ತಿತರರಿದ್ದರು. ನೂತನ ಶಾಸಕ ಪ್ರಕಾಶ ಕೋಳಿವಾಡ ಹಾಗೂ 6 ಜನ  ವೈದ್ಯರನ್ನು ಗೌರವಿಸಲಾಯಿತು.

error: Content is protected !!