ದಾವಣಗೆರೆ, ಜು.10 – ಶಿವಸಿಂಪಿ ಸಮಾಜದ ಕುಲಗುರು ಶರಣ ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಶಿವಸಿಂಪಿ ಸಮಾವೇಶದ ಲೋಗೋ ಅನಾವರಣ ಕಾರ್ಯಕ್ರ ಮವನ್ನು ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಘದ ಗೌರವಾಧ್ಯಕ್ಷ ಚಿಂದೋಡಿ ಚಂದ್ರಧರ್ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಸಮಾವೇಶವನ್ನು ಅಚ್ಚುಕಟ್ಟಾಗಿ ಮಾಡಲು ನಾವುಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಸಮಾಜದ ಎಲ್ಲಾ ಬಂಧುಗಳು ತನು, ಮನ, ಧನ ನೀಡುವ ಮೂಲಕ ಹೆಚ್ಚಿನ ಸಹಕಾರ ನೀಡಲು ಮನವಿ ಮಾಡಿದರು
ಸಮಾಜದ ಅಧ್ಯಕ್ಷ ಬೂಸ್ನೂರು ಗುರುಬಸಪ್ಪ ಮಾತನಾಡಿ, ಸಮಾಜ ಬಾಂಧವರ ಅನಿಸಿಕೆ ಪಡೆದು ಸಮಾವೇಶವನ್ನು ಆಗಸ್ಟ್ 13ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ 2023ರಲ್ಲಿ, ಎಸ್ಎಸ್ ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇ. 75 ಮತ್ತು ಅಧಿಕ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಶಿವಸಿಂಪಿ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇದೇ ದಿನಾಂಕ 31 ಅಂತಿಮ ದಿನವಾಗಿದ್ದು ಅರ್ಜಿಗಳನ್ನು ಶಿವಸಿಂಪಿ ಸಮಾಜ, ಶಿವಯೋಗಾಶ್ರಮ ಕಾಂಪ್ಲೆಕ್ಸ್, ಮೊದಲನೇ ಮಹಡಿ ರೂಂ. ನಂ. 10, ಜಯದೇವ ವೃತ್ತ, ದಾವಣಗೆರೆ. ಇಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು ( 9844636575) ಹಾಗೂ ಮಲ್ಲಾಬಾದಿ ಚನ್ನಬಸಪ್ಪ (7411770949) ಅವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು ಸ್ವಾಗತಿಸಿದರು. ಖಜಾಂಚಿಗಳಾದ ಜಗದೀಶ್ ಬಾವಿಕಟ್ಟಿ ವಂದಿಸಿದರು. ಸಹ ಕಾರ್ಯದರ್ಶಿ ಜ್ಞಾನೇಶ್ವರ್ ಜವಳಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಹೇಮಣ್ಣ ಹೆಚ್. ಕೆ. ಕಣಕುಪ್ಪಿ ಮುರುಗೇಶಪ್ಪ, ಮಾಧ್ಯಮ ಕಾರ್ಯದರ್ಶಿ ಶಿವಕುಮಾರ್ ಬಿ.ಎಂ. ವಿರೂಪಾಕ್ಷ ಜವಳಿ, ಮಾಲ್ವಿ ಮಹಾದೇವಪ್ಪ, ಗುತ್ತಿ ಚನ್ನವೀರಪ್ಪ, ಶ್ರೀಮತಿ ಅನು ಕೊಟ್ರೇಶ್, ಶ್ರೀಮತಿ ದೀಪಾ, ಮಲ್ಲಾಬಾದಿ ಚನ್ನಬಸಪ್ಪ, ಮಹೇಶ್ ಬೇತೂರ್, ಮಾಲತೇಶ್ ಬಿ, ಮಲ್ಲಿಕಾರ್ಜುನ ಕಬ್ಬೂರ್, ಮಂಜುನಾಥ ಪಿ. ಎನ್. ಕೊಟ್ರೇಶ್ ಮುಂತಾದವರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.