ದಾವಣಗೆರೆ, ಜು. 10- ನಗರದ ವಿನೂತನ ಮಹಿಳಾ ಸಮಾಜದಲ್ಲಿ ಶ್ರೀಮತಿ ಚಂದ್ರಿಕಾ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸಾಧಾನಾಶ್ರಮದ ಮಾತಾ ಯೋಗಾನಂದಮಯಿ ಸ್ತ್ರೀಯರು ಮತ್ತು ಸಾಮಾಜಿಕ ಮೌಲ್ಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಹೇಮಾ ಗಣೇಶ್, ಇಂದಿರಾ ರೆಡ್ಡಿ, ಸುಧಾ ಪಾಟೀಲ್, ಗೀತಾ ರೆಡ್ಡಿ, ಭುವನ ಚಂದ್ರಶೇಖರ್, ಮಮತಾ ನಾಗರಾಜ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೈತ್ರ ಜಗದೀಶ್, ಮಮತಾ ಶ್ರೀಧರ್ ಪ್ರಾರ್ಥಿಸಿದರು. ಸುಕನ್ಯಾ ಬಸವರಾಜ್ ಸ್ವಾಗತಿಸಿದರು. ಪುಷ್ಪಾ ಬಸವರಾಜ್ ಅತಿಥಿ ಪರಿಚಯ ನಡೆಸಿಕೊಟ್ಟರು. ಲತಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.