ಭವಿಷ್ಯ ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ

ಭವಿಷ್ಯ ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ

ಜಾಕೀರ್ ಹುಸೇನ್ ಕಾಲೇಜ್‌ನ `ಪದವಿ ದಿನ’ ಕಾರ್ಯಕ್ರಮದಲ್ಲಿ ಸೈಯದ್ ಸೈಫುಲ್ಲಾ  

ದಾವಣಗೆರೆ, ಜು.10- ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಮಿಲ್ಲತ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಸೈಯದ್ ಸೈಫುಲ್ಲಾ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ನಗರದ ಜಾಕೀರ್ ಹುಸೇನ್ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ `ಪದವಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪದವಿಗಳ ಮಹತ್ವವನ್ನು ವಿವರಿಸಿದ ಸೈಫುಲ್ಲಾ ಅವರು ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಅರಿತು ಕಠಿಣ ಶ್ರಮದಿಂದ ಜೀವನ ವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.

ಮಿಲ್ಲತ್ ವಿದ್ಯಾಸಂಸ್ಥೆಯ  ಆಡಳಿತಾಧಿಕಾರಿ ಸೈಯದ್ ಅಲಿ,  ಜಾಕೀರ್ ಹುಸೇನ್ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲರಾದ ಶ್ರೀಮತಿ ಕುಪ್ತರಿ ಬೇಗಂ, ಎಸ್.ಕೆ.ಎ.ಪಿ.ಹೆಚ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜುಲ್ಕರ್ ನೈಸ್ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಕಾಶೀಫ್ ಉಲ್ಲಾ ಸ್ವಾಗತಿಸಿದರು. ಹೆಚ್.ಎಂ.ಮೆಹರ್‌ತಾಜ್ ನಿರೂಪಣೆ ಮಾಡಿದರು. ಡಾ.ಸೈಯದ್ ಅಬ್ದುಲ್ ಖಾದರ್ ಜಿಲಾನಿ  ವಂದಿಸಿದರು. 

ಇದೇ ಸಂದರ್ಭದಲ್ಲಿ ಇಬ್ಬರು  ಎಂ.ಎ. ಉರ್ದು ಸ್ನಾತ್ತಕೋತ್ತರ   ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ದಾಖಲಾತಿ ಒದಗಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅರ್ಷಿಯಾ ಪೀರ್‌ದೋಸ್, ಡಾ.ಸೈಯದ್ ಅಬ್ದುಲ್ ಖಾದರ್ ಜಿಲಾನಿ, ಫರಾನ್ ಡಿ, ಕಾಶೀಫ್ ಉಲ್ಲಾ ಆರ್.ಷರೀಫ್, ಸಬ್ರೀನ್ ತಾಜ್, ಸೈಯದ್ ಅಲಿ, ಸುನೀತಾ ಜೋಶಿ, ಅಬ್ದುಲ್ ಖಾದರ್ ಜಿಲಾನಿ, ಪೀರ್‌ದೋಸ್, ಮೆಹರ್ ತಾಜ್, ಮೆಹರ್ ತಾಜ್ ಹೆಚ್.ಎಂ,  ಆಫ್ರೀಸ್, ಸಾನಿಯಾ ಮತ್ತು ವಾಣಿ ಗ್ರಂಥಪಾಲಕ ಯಶವಂತನಾಯ್ಕ ಹಾಜರಿದ್ದರು.

error: Content is protected !!