ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ಜಗಳೂರು ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಜು.9- ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿ ಯಾನಕ್ಕೆ ಸಾರ್ವಜನಿಕರು ಕೈಜೋಡಿಸಿ, ಯಶಸ್ವಿಗೊಳಿಸ ಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.

ಪಟ್ಟಣದ  ಹಳೇ ಪಟ್ಟಣ ಪಂಚಾಯಿತಿ ಮುಂಭಾಗ ಮಾಸಿಕವಾಗಿ ಹಮ್ಮಿಕೊಂಡಿರುವ  ಪೌರಕಾರ್ಮಿಕ ರೊಂದಿಗೆ `ಕಸ ಗುಡಿಸುವ ಮೂಲಕ ಸ್ವಚ್ಛತೆಯ ಜಾಗೃತಿ ಅಭಿಯಾನ’ ಕುರಿತು ಅವರು ಮಾತನಾಡಿದರು.

ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಿ ಕೊಳೆಯದಂತಹ ಪ್ಲಾಸ್ಟಿಕ್‌ ನಂತಹ  ತ್ಯಾಜ್ಯ ವಸ್ತುಗಳನ್ನು ಮತ್ತು ಮಾಲಿನ್ಯಕ್ಕೆ ಕಾರಣವಾಗುವ ವಿಷಪೂರಿತ ಘನ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ನಿಗದಿತ ಸ್ಥಳದಲ್ಲಿ ಸಂಗ್ರಹಣೆ ಮಾಡಬೇಕು.

ಪಟ್ಟಣವನ್ನು ಸುಂದರವನ್ನಾಗಿಡಲು ಸಾರ್ವಜನಿಕರು ಪೌರ ಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದರು. ಸ್ವಚ್ಚತೆಯ ಕಾಯಕ ಮಾಡುವ ಪೌರ ಕಾರ್ಮಿಕರಿಗೆ ಗೌರವ ನೀಡಬೇಕು. ನನ್ನ ಆಡಳಿತಾವಧಿಯಲ್ಲಿ ಪೌರ ಕಾರ್ಮಿಕರ ಶ್ರೆಯೋಭಿವೃದ್ಧಿಗೆ ನೆರವಾಗುವೆ ಎಂದು ಹೇಳಿದರು.

ಅಧಿಕಾರಿಗಳಿಗೆ ತರಾಟೆ: ಹಳೇ ಸಾರ್ವಜನಿಕ ಆಸ್ಪತ್ರೆ ಹಿಂಭಾಗ  ಶವಾಗಾ ರದ ಸುತ್ತಲೂ ಕಲುಷಿತ ಚರಂಡಿ, ಕಸ, ತ್ಯಾಜ್ಯ ತುಂಬಿ ಕೆಟ್ಟ ವಾತಾವರಣ ಸೃಷ್ಟಿ ಯಾಗಿದೆ. ಇದನ್ನು ತಕ್ಷಣವೇ ಸ್ವಚ್ಛಗೊಳಿಸ ಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ತರಾಟೆ ತೆಗದುಕೊಂಡರು.

ಪಟ್ಟಣದಲ್ಲಿ ಬಾರ್‌ಗಳ ಮುಂಭಾಗ ದಲ್ಲಿ ಜನರು  ಮದ್ಯ ಸೇವಿಸಿ ಖಾಲಿ ಬಾಟಲಿ, ಲೋಟಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಿ ಎಂದು ಬಾರ್ ಮಾಲೀಕರಿಗೆ ತಿಳಿಸಿದರು.

ಪಟ್ಟಣದ ಮರೇನಹಳ್ಳಿ, ರಾಜೇಂದ್ರ ಪ್ರಸಾದ್ ರಸ್ತೆ, ಬಯಲು ರಂಗಮಂದಿರ, ಇಂದಿರಾ ಕ್ಯಾಂಟೀನ್, ವಿವಿಧ ರಸ್ತೆಗಳಲ್ಲಿ ಪೌರ ಕಾರ್ಮಿಕರೊಂದಿಗೆ  ಕಾಲ್ನಡಿಗೆಯಲ್ಲಿ ಸಂಚರಿಸಿ ಸ್ವಚ್ಛತೆ ಕಾಪಾಡಲು ಸೂಚಿಸಿದರು.

ತಾಲ್ಲೂಕಿನ ಹನುಮಂತಾಪುರ ಗ್ರಾಮದ  ಬಸವರಾಜ್ ಎಂಬ ವ್ಯಕ್ತಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದು, ಶಾಸಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ಭೇಟಿ ನೀಡಿ ವೈಯಕ್ತಿಕ ರೂ. 20,000 ನೆರವು ನೀಡಿ ಕುಟುಂಬದವರಿಗೆ ಸಾಂತ್ವನ  ಹೇಳಿದ ಶಾಸಕರು, ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸರ್ಕಾರದಿಂದ ಮೃತರಿಗೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ರಹದಾರಿಯನ್ವಯ ಸಂಚಾರ ಮಾಡಬೇಕು. 

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ  ಶಕ್ತಿ ಯೋಜನೆ ತಾಲ್ಲೂಕಿನ ಮಹಿಳೆಯರಿಗೆ ಸದುಪಯೋಗವಾಗಬೇಕು ಎಂದು ನಿಯಂತ್ರಣ ಅಧಿಕಾರಿಗೆ ಸಲಹೆ ನೀಡಿದರು.

ನಂತರ ಇಂದಿರಾ ಕ್ಯಾಂಟೀನ್‌ನಲ್ಲಿ  ಪೌರ ಕಾರ್ಮಿಕ ಹಾಗೂ ಜನಸಾಮಾನ್ಯರೊಂದಿಗೆ  ತಿಂಡಿ ಸವಿದು ಸ್ವಚ್ಛತೆ ಕಾಪಾಡಿ, ಗುಣಮಟ್ಟದ ಆಹಾರ ತಯಾರಿಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ‌ ಸದಸ್ಯರಾದ ಮಹಮ್ಮದ್ ಅಲಿ, ರವಿಕುಮಾರ್, ರಮೇಶ್ ರೆಡ್ಡಿ, ಮಂಜಣ್ಣ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಆರೋಗ್ಯ ನಿರೀಕ್ಷಕ ಖಿಫಾಯತ್, ಕಂದಾಯ ನಿರೀಕ್ಷಕ ಮೋದಿನ್, ಟಿಎಚ್‌ಓ ಡಾ.ನಾಗರಾಜ್ ಮತ್ತಿತರರು ಇದ್ದರು.

error: Content is protected !!