ಅತ್ತಿಗೆರೆ ಅರವಿಂದ ವಿದ್ಯಾಸಂಸ್ಥೆಗೆ ನೀರಿನ ಘಟಕ ದೇಣಿಗೆ

ಅತ್ತಿಗೆರೆ ಅರವಿಂದ ವಿದ್ಯಾಸಂಸ್ಥೆಗೆ ನೀರಿನ ಘಟಕ ದೇಣಿಗೆ

ದಾವಣಗೆರೆ, ಜು. 9 – ದಾವಣಗೆರೆಯ ರೌಂಡ್ ಟೇಬಲ್ 76 ವತಿಯಿಂದ ಅರವಿಂದ ವಿದ್ಯಾಸಂಸ್ಥೆಯ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಪದವಿಪೂರ್ವ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಹಾಗೂ ಆಡಳಿತ ಮಂಡಳಿಗೆ ಸಂತೋಷ ತಂದಿದ್ದಾರೆ.  

ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ರೌಂಡ್ ಟೇಬಲ್ 76ರ ಛೇರ್ಮನ್ ಸುಹಾಸ್ ದತ್ತಾತ್ರೇಯ ಅವರು, ಈ ಸಂಸ್ಥೆಯು ಉಚಿತ ಶಿಕ್ಷಣ ನೀಡುವ ಮೂಲಕ ಸಮಾಜದ ಬಡ, ಹಿಂದುಳಿದ ವರ್ಗದ ಮಕ್ಕಳಿಗೆ ನೆರವಾಗುತ್ತಿರುವುದು ಅತಿ ಸಂತೋಷದ ವಿಷಯ ಎಂದರು.  ಇಂತಹ ಮಹತ್ವದ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ  ಶ್ರೀ ಅರವಿಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ. ಹೆಚ್.ಚನ್ನಪ್ಪ ಪಲ್ಲಾಗಟ್ಪೆ ಹಾಗೂ ಗೌರವ ಕಾರ್ಯದರ್ಶಿ ಪ್ರೊ. ಕೆ.ಆರ್.ಸಿದ್ದಪ್ಪ ಅವರನ್ನು ಶ್ಲ್ಯಾಘಿಸಿದರು.

ರೌಂಡ್ ಟೇಬಲ್‌ನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಅರವಿಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಚೇತನ್ ಪಲ್ಲಾಗಟ್ಟೆ ಮಾತನಾಡಿ, ನಮ್ಮ ಟೇಬಲ್ ವತಿಯಿಂದ ಇನ್ನೂ ಹೆಚ್ಚಿನ ನೆರವನ್ನು ಕೊಡುವುದಾಗಿಯೂ, ಅದಕ್ಕಾಗಿ ಆಡಳಿತ ಮಂಡಳಿಯವರೂ ಹಣ ನೀಡುವ ಮೂಲಕ ಸಹಕರಿಸುವ ಅಗತ್ಯತೆಯನ್ನು ತಿಳಿಸಿದರು. 

ರೌಂಡ್ ಟೇಬಲ್ ವತಿಯಿಂದ ಕಿರಣ್ ಎಂ. ಹಾಗೂ ಅಭಿಷೇಕ್ ಶೇಠ್ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶು ಪಾಲ ಹೆಚ್.ಚಂದ್ರಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. 

ಉಪನ್ಯಾಸಕ  ಸುಭಾಷ್ ಶಿಂಧೆ ಸ್ವಾಗತಿಸಿದರು. ಉಪನ್ಯಾಸಕ ಎನ್.ಎಸ್. ಪರಮೇಶ್ವರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಎಂ.ಬಸವರಾಜಪ್ಪ, ಸಲ್ಮಾ, ನಾಗವೇಣಿ, ಸೌಮ್ಯ,  ಭೋಜರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!