ಪಾನಮುಕ್ತ ಸಮಾಜ ನಿರ್ಮಾಣ ವೀರೇಂದ್ರ ಹೆಗ್ಗಡೆ ಅವರ ಗುರಿ

ಪಾನಮುಕ್ತ ಸಮಾಜ ನಿರ್ಮಾಣ ವೀರೇಂದ್ರ ಹೆಗ್ಗಡೆ ಅವರ ಗುರಿ

ಮಲೇಬೆನ್ನೂರು, ಜು.9- ಪಾನಮುಕ್ತ ಸುಂದರ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಜನಜಾಗೃತಿ ವೇದಿಕೆ ಹಾಗೂ ಸಮುದಾಯದ ಸಹಯೋಗದೊಂದಿಗೆ ಮದ್ಯ ವರ್ಜನಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ ಎಂದು ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಹೇಳಿದರು.

ಅವರು ಶನಿವಾರ ಕುಣೆಬೆಳಕೆರೆ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಮದ್ಯವರ್ಜನಾ ಶಿಬಿರ ಹಮ್ಮಿಕೊಳ್ಳುವ ಕುರಿತು ಚರ್ಚಿಸಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜನಜಾಗೃತಿ ವೇದಿಕೆಯ ಸದಸ್ಯ ಜಿ.ಮಂಜುನಾಥ್ ಪಟೇಲ್ ಸಭೆಯನ್ನು ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬಸೀರ್ ಭಾನು, ಬೀರಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಚಂದ್ರಪ್ಪ, ಗ್ರಾಮದ ಮುಖಂಡರಾದ ಕೆ.ಸಿದ್ದಪ್ಪ, ಸತ್ತೂರು ಅಂಜಿನಪ್ಪ, ಜಿ.ಸಿ.ರುದ್ರಪ್ಪ, ಮಡಿವಾಳರ ಮಲ್ಲೇಶಪ್ಪ, ಅಡಿವೆಣ್ಣರ ಬಸವರಾಜಪ್ಪ, ಎನ್.ಡಿ.ಅಂಜಿನಪ್ಪ, ಒಕ್ಕೂಟದ ಅಧ್ಯಕ್ಷರಾದ ಅಜ್ಜೋಳ್ ವಿಜಯಕುಮಾರ್, ಉಮೇಶ್, ಸಲಗನಹಳ್ಳಿ ವಿಜಯಕುಮಾರ್, ಜಯಪ್ಪ, ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಮೇಲ್ವೆಚಾರಕರಾದ ಸಂಪತ್ ಲಕ್ಷ್ಮಿ, ಸಂತೋಷಿನಿ, ರಕ್ಷಿತಾ, ಚಂದ್ರಪ್ಪ, ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕೆ.ಬೇವಿನಹಳ್ಳಿ ವಲಯ ಮೇಲ್ವಿಚಾರಕ ಮಾರುತಿಗೌಡ ಸ್ವಾಗತಿಸಿದರು.

error: Content is protected !!