ನಿತ್ಯ ಯೋಗದಿಂದ ಮಾನಸಿಕ ಶಾಂತಿ

ನಿತ್ಯ ಯೋಗದಿಂದ ಮಾನಸಿಕ ಶಾಂತಿ

ನಗರದ ಎ.ಆರ್.ಜಿ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ  ಪ್ರಾಂಶುಪಾಲ ಬೋರಯ್ಯ

ದಾವಣಗೆರೆ, ಜು. 9-  ನಿತ್ಯ ಯೋಗದಿಂದ ಮಾನಸಿಕ ಶಾಂತಿ ಸಿಗುವುದರ ಜೊತೆಗೆ ಆಯಸ್ಸು ಮತ್ತು ಆರೋಗ್ಯ ಇಮ್ಮಡಿಗೊಳಿಸುತ್ತದೆ. 

ಜಗತ್ತಿನಾದ್ಯಂತ ಜೂನ್  21 ಯೋಗ ದಿನವೆಂದು ಆಚರಿಸಲಾಗುತ್ತದೆ. ನಮ್ಮ ಜೀವನದ ಉಸಿರಿರುವವರೆಗೂ ಆಚರಣೆಗಳನ್ನು ಮಾಡೋಣ ಮತ್ತು ಭಾರತವನ್ನು ಸದೃಢಗೊಳಿಸೋಣ ಎನ್ನುವ ಮಾತುಗಳನ್ನು ಪ್ರಾಂಶುಪಾಲ ಡಾ. ಜಿ.ಬಿ. ಬೋರಯ್ಯ ತಿಳಿಸಿದರು.

ನಗರದ ಎ.ಆರ್.ಜಿ. ಕಾಲೇಜಿನಲ್ಲಿ ಕಳೆದ ವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಕಾಲ ಋಷಿ, ಮುನಿಗಳು ಯೋಗ ಮತ್ತು ಧ್ಯಾನದಿಂದ ಬದುಕಿದ್ದರು. ಪಂಚಭೂತಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಲೌಖಿಕ ಜಗತ್ತಿನಲ್ಲಿ ಎಲ್ಲವನ್ನು ಬಳಸಿಕೊಂಡು, ಕೊನೆಯವರೆಗೂ ರೋಗರುಜಿನಗಳಿಂದ ಮುಕ್ತರಾಗಿ ಸಮಚಿತ್ತದ ಮನಸ್ಸನ್ನು ಹೊಂದುವುದರ ಮೂಲಕ ನಮ್ಮ ದೇಹವನ್ನು ಸಾರ್ಥಕಪಡಿಸಿಕೊಳ್ಳಬಹುದು  ಎಂದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ, ಯೋಗದ ಮಹತ್ವ ಮತ್ತು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಮಾತನಾಡಿದರು. 

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಅನಿತಕುಮಾರಿ,  ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಹೆಚ್.ಆರ್. ತಿಪ್ಪೇಸ್ವಾಮಿ,  ಕ್ರೀಡಾ ವಿಭಾಗದ ಸಂಚಾಲಕ ಪ್ರೊ ಆನಂದ, ಎನ್.ಸಿ.ಸಿ. ಲೆಪ್ಟಿನೆಂಟ್ ಪ್ರೊ. ರಮೇಶ್ ಪೂಜಾರ, ಗ್ರಂಥಾಲಯ ವಿಭಾಗದ ಡಾ. ಚಮನ್‍ಸಾಬ್, ಮತ್ತು ಪ್ರೊ. ರಶ್ಮಿ, ಪಿ, ಅಧೀಕ್ಷಕ ಜಿ.ಆರ್. ಕರಿಬಸಪ್ಪ, ಸಲ್ಮಾ, ಕವಿತಾ ಪಾಟೀಲ, ಬೇಬಿ ಅಮೀನಾ ಮೊದಲಾದವರು ಉಪಸ್ಥಿತರಿದ್ದರು.  

ಅಶ್ವಿನಿಬಾಯಿ, ಪಲ್ಲವಿ ಅವರು ಯೋಗಾಸನದ ವಿವಿಧ ಆಸನಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.

error: Content is protected !!