ಮನೋವೈದ್ಯ ಡಾ. ಸಂದೀಪ್
ದಾವಣಗೆರೆ, ಜು. 6- ಪ್ರಸ್ತುತ ದಿನಗಳಲ್ಲಿ ತೀವ್ರತರ ಒತ್ತಡವನ್ನು ನಿರ್ವಹಿಸಲಾಗದೆ ಆತ್ಮಹತ್ಯೆ ಗೀಡಾಗುತ್ತಿರುವುದು ವಿಷಾದನೀಯ. ಆತ್ಮಹತ್ಯೆ ಗೀಡಾ ಗುತ್ತಿರುವವರು ಖಿನ್ನತೆಗೆ ಒಳ ಗಾಗಿರುತ್ತಾರೆ. ಜೊತೆಗೆ ಖಿನ್ನತೆಗೆ ಒಳಗಾಗಿರುವವರು ಯಾರ ಜೊತೆ ಉತ್ತಮ ಸಂಬಂಧವನ್ನು ಅಥವಾ ಸಂವಹನವನ್ನು ಕೂಡ ಮಾಡುವುದಿಲ್ಲ ಎಂದು ಮನೋವೈದ್ಯ ಡಾ. ಸಂದೀಪ್ ತಿಳಿಸಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಾವಣಗೆರೆ ಇವರ ವತಿಯಿಂದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಒತ್ತಡ ನಿವಾರಣೆ ಮತ್ತು ಮಾನಸಿಕ ಆರೋಗ್ಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಅತಿ ಬೇಜಾರು, ಅತಿಯಾದ ಚಿಂತೆ, ನನಗೆ ಯಾರೂ ಇಲ್ಲ ಎಂಬ ಮನೋಭಾವನೆ ಹಾಗೂ ನಕಾರಾತ್ಮಕ ಯೋಚನೆಗಳಿಂದ ಕೂಡಿರುತ್ತಾರೆ. ಎಲ್ಲವೂ ಕೂಡ ಖಿನ್ನತೆಯ ಲಕ್ಷಣಗಳಾಗಿವೆ. ಹಾಗಾಗಿ ಆತ್ಮಹತ್ಯಾ ಪ್ರವೃತ್ತಿಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಕೂಡ ಮನೋವೈದ್ಯರ ತಂಡದ ಬಳಿ ನಿಮ್ಮ ಸಮಸ್ಯೆಗಳನ್ನು, ಒತ್ತಡಗಳನ್ನು ಹಂಚಿಕೊಳ್ಳಿ. ಅವರ ಮುಖಾಂತರ ಆಪ್ತ ಸಮಾಲೋಚನೆಯನ್ನು ಅಥವಾ ಚಿಕಿತ್ಸೆಯನ್ನು ಪಡೆದು, ಖಿನ್ನತೆಯಿಂದ ಹೊರ ಬರಬಹುದಾಗಿದೆ ಎಂದರು.
ಸೈಕಿಯಾಟ್ರಿಕ್ ಸೋಷಿ ಯಲ್ ವರ್ಕರ್ ಎಂ. ಸಂತೋ ಷ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮಾನಸಿಕ ಆರೋಗ್ಯ ಎನ್ನು ವುದು ಅವಶ್ಯಕವಾಗಿದೆ. ಈ ಮಾನಸಿಕ ಆರೋಗ್ಯ ವನ್ನು ವೃದ್ಧಿಸಿಕೊಳ್ಳಬೇಕಾದರೆ ಪ್ರತಿನಿತ್ಯ ವೂ ಎಲ್ಲರೂ ಸಹ ಧ್ಯಾನ, ಯೋಗ, ಪ್ರಾಣಾಯಾಮ, ನಿಮ್ಮ ಪ್ರೀತಿ ಪಾತ್ರರೊಡನೆ ಉತ್ತಮ ವಾದ ಬಾಂಧವ್ಯ, ಸಂವಹನ, ದೈನಂದಿನ ಚಟುವಟಿಕೆಗಳಲ್ಲಿ, ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ಪ್ರತಿಯೊಬ್ಬರೂ ಕೂಡ ಒತ್ತಡ ರಹಿತ ಸಕಾರಾತ್ಮಕ ಮಾನಸಿಕ ಆರೋಗ್ಯವನ್ನು ಪಡೆಯಬಹುದಾಗಿದೆ. ಮತ್ತು ಹೆಚ್ಚಿನ ಮಾಹಿತಿಗಾಗಿ ಟೆಲಿ ಮನಸ್ 14416 ಕ್ಕೆ ಕರೆ ಮಾಡಬಹುದು ಎಂದು ಎಲ್ಲಾ ಸಿಬ್ಬಂದಿ ವರ್ಗದವರಿಗೂ ಕೂಡ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಉಪ ಸಮಾದೇಷ್ಟ ಸಂದೀಪ್, ಬೋಧಕರಾದ ಕಿಶೋರ್, ಆರೋಗ್ಯ ಇಲಾಖೆ ಶ್ರೀಮತಿ ಪದ್ಮಾವತಿ ಸೇರಿದಂತೆ, ಇತರರು ಹಾಜರಿದ್ದರು