ಹರಪನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಪ್ರತಾಪ್

ಹರಪನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಪ್ರತಾಪ್

ಹರಪನಹಳ್ಳಿ, ಜು.5- ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮನ್ವಯ ಸಮಿತಿ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪ್ರತಾಪ್ ಚಲವಾದಿ, ವಿಜಯನಗರ ಜಿಲ್ಲೆಯ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಉಪಾಧ್ಯಕ್ಷರಾಗಿ ಗಿನ್ನಾಳ ರಾಘವೇಂದ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ರಾಜ್ಯ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮನ್ವಯ ಸಮಿತಿ ಪದಾಧಿ ಕಾರಿಗಳ ನೇಮಕ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ನೂತನ ಉಪಾಧ್ಯಕ್ಷ ಗಿನ್ನಾಳ ರಾಘವೇಂದ್ರ ಅವರು, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ದೃಷ್ಟಿಯಿಂದ ಅವಿದ್ಯಾವಂತ, ಅರೆ ವಿದ್ಯಾವಂತ, ಕಡುಬಡವ, ಕೂಲಿಕಾರರ ಸಮುದಾಯ ಅವರ ಜೊತೆ ನಾವು ಹೊಂದಿಕೊಳ್ಳಲೇಬೇಕು. ಅವರನ್ನು ನಮ್ಮೊಂದಿಗೆ ಕೊಂಡೊಯ್ಯಲೇ ಬೇಕು ಎಂದರು.

ಇರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ಕೆಲಸವಾ ಗಬೇಕೇ ಹೊರತು ವಿದ್ಯಾವಂತ, ಹಣವಂತ ಮತ್ತು ನಯ-ನಾಜೂಕಿನ ಸಮುದಾಯಕ್ಕಾಗಿ ಪರಿತಪಿಸುತ್ತಾ ಕೂರುವುದು ಸರಿಯಲ್ಲ ಎಂದರು.

ಕೂಡ್ಲಿಗಿ ತಾಲ್ಲೂಕಿನ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ಭಾಗ್ಯಮ್ಮ ಮಾತನಾಡಿ, ಎಸ್‍ಡಿಎಮ್‍ಸಿಗಳು ಶಾಲೆಯ ಮಾಲೀಕತ್ವವನ್ನು ತಮ್ಮದನ್ನಾಗಿಸಿಕೊಂಡು ಶಾಲಾ ಆಡಳಿತ, ಅಭಿವೃದ್ಧಿ, ಕಲಿಕೆ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಮರು ಸ್ಥಾಪಿಸಿ, ಭರವಸೆ ಕಳೆದುಕೊಂಡಿರುವ ಸರ್ಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೆ.ಎಸ್. ಹರೀಶ್, ಕೆ.ಎನ್. ರಾಜೇಶ್ವರಿ, ಸಿ. ಲಕ್ಷ್ಮಿದೇವಿ, ಟಿ. ಭಾಗ್ಯ, ಪರ್ವೀನ್, ಎಂ. ಕಾಳಮ್ಮ, ಪಟ್ನಾಮಮಾದ ಬಸವರಾಜ, ಶಿರಹಟ್ಟಿ ಹನುಮಂತ, ಕಿಂದ್ರೀ ಹಾಲೇಶ್, ಎಂ. ಗೀತಾ, ಜಾಕೀರ್ ಹುಸೇನ್ ಹಾಗೂ ಇತರರು ಇದ್ದರು.

error: Content is protected !!