ಬೇವಿನಹಳ್ಳಿಯಲ್ಲಿ ಗುರು ಪೌರ್ಣಿಮೆ

ಬೇವಿನಹಳ್ಳಿಯಲ್ಲಿ ಗುರು ಪೌರ್ಣಿಮೆ

ಮಲೇಬೆನ್ನೂರು, ಜು.5- ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯಲ್ಲಿ ಬೆಳೆ ಯಲಿ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಆಶಿಸಿದರು.

ಅವರು ಸೋಮವಾರ ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಸ್ವ-ಸಹಾಯ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೇಲೂರು ತಾಲ್ಲೂಕಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಿ, ನೀರು ತುಂಬಿಸುವ ಕೆಲಸವನ್ನೂ ಸೋಮಶೇಖರ ಶ್ರೀಗಳು ಮಾಡಿರುವುದು ಪುಣ್ಯದ ಕೆಲಸವಾಗಿದೆ ಎಂದು ಚಂದ್ರಶೇಖರ್ ಪೂಜಾರ್ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಶಕ್ತಿ ತುಂಬುವ ಕೆಲಸವನ್ನು ಸ್ವ-ಸಹಾಯ ಸಂಘಗಳ ಮೂಲಕ ಧರ್ಮಸ್ಥಳ ಮತ್ತು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ವಕೀಲ ನಂದಿತಾವರೆ ತಿಮ್ಮನಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ.ಮಹೇಶ್ವರಪ್ಪ, ಪತ್ರಕರ್ತರಾದ ಹೆಚ್.ಎಂ.ಸದಾನಂದ್, ಜಿಗಳಿ ಪ್ರಕಾಶ್, ಸ್ವಸಹಾಯ ಸಂಘಗಳ ಪರವಾಗಿ ರೇಷ್ಮಾ, ಗೌರಮ್ಮ, ಪ್ರೀತಿ ಪಾಟೀಲ್ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುಷ್ಪಗಿರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ.ಎಸ್.ಅಡವಿ ಮಾತನಾಡಿದರು.  ಜಿಗಳಿಯ ಜಿ.ಪಿ.ಹನುಮಗೌಡ ಸ್ವಾಗತಿಸಿದರು.

error: Content is protected !!