ರಾಣೇಬೆನ್ನೂರಿನಲ್ಲಿ ರೋಟರಿ ಪದಾಧಿಕಾರಿಗಳ ಪ್ರಮಾಣ ವಚನ

ರಾಣೇಬೆನ್ನೂರಿನಲ್ಲಿ ರೋಟರಿ ಪದಾಧಿಕಾರಿಗಳ ಪ್ರಮಾಣ ವಚನ

ರಾಣೇಬೆನ್ನೂರು, ಜು. 5- ಇಲ್ಲಿನ ರೋಟರಿ ಹಾಗೂ ಇನ್ನರ್ ವೀಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು  ಎಸ್ ಜೆ ಎಂ ವಿ ಮಹಿಳಾ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ರೋಟರಿ ಅಧ್ಯಕ್ಷ  ಜಯಣ್ಣ ಜಂಬಗಿ, ಕಾರ್ಯದರ್ಶಿ ಪುಟ್ರಾಜ್ ಅಂಗಡಿ ಸಂಗಡಿಗರಿಗೆ ಜಿಲ್ಲಾ ಕಾರ್ಯದರ್ಶಿ ವಾಸುಕಿ ಸಂಜಿ, ಇನ್ನರ್ ವ್ಹೀಲ್ ಅಧ್ಯಕ್ಷೆ ಶೋಭಾ ಜಂಬಗಿ, ಕಾರ್ಯದರ್ಶಿ ಕವಿತಾ ಬಾದಾಮಿ ಸಂಗಡಿಗರಿಗೆ ರಾಜೇಶ್ವರಿ ಸಂಜಿ ಅವರು ಅಧಿಕಾರದ ಹೊಣೆಗಾರಿಕೆಯನ್ನು ಬೋಧಿಸಿದರು.

ಮಾಲತೇಶ ಅರಳಿಮಟ್ಟಿ, ಡಾ. ಎಂಎಂ ಅನಂತರೆಡ್ಡಿ, ಸುಜಾತ ಮಿಣಜಿಗಿ, ಪಾರ್ವತಿ ಹೂಲಿಹಳ್ಳಿ ಜಿ.ಎಸ್.ರಾಮಚಂದ್ರ ಮುಂತಾದವರು ವೇದಿಕೆಯಲ್ಲಿದ್ದರು.

error: Content is protected !!