ಕಸ ವಿಲೇವಾರಿ ವಾಹನದಲ್ಲಿಯೇ ಕಸ ಹಾಕಲು ಕರೆ

ಕಸ ವಿಲೇವಾರಿ ವಾಹನದಲ್ಲಿಯೇ ಕಸ ಹಾಕಲು ಕರೆ

ಹರಪನಹಳ್ಳಿ, ಜು.5 – ಪಟ್ಟಣದ ನಾಗರಿಕರು ಕಸವನ್ನು ತಮ್ಮ ಮನೆ ಬಳಿ ಬರುವ ಕಸದ ವಾಹನದಲ್ಲಿಯೇ ಹಾಕಿ, ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮನವಿ ಮಾಡಿದ್ದಾರೆ.

ಪಟ್ಟಣದ ಮಠದ ಕೇರಿಯ ಜಾಲಗಲ್ ಬಳಿ ಪೌರ ಕಾರ್ಮಿಕ  ರಿಂದ  ಚರಂಡಿ ಸ್ವಚ್ಛಗೊಳಿಸಿ ಮಾತ ನಾಡಿ, ಈ ಭಾಗದಲ್ಲಿ ಚರಂಡಿಯಲ್ಲಿ ತ್ಯಾಜ್ಯ ಹಾಕಿರುವುದರಿಂದ ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿ ಯುತ್ತದೆ. ಆಗ ಅಕ್ಕ ಪಕ್ಕದವರಿಗೆ ವಾಸನೆ ಮತ್ತು ಸಂಚಾರಕ್ಕೆ ತೊಂದರೆಯಾಗುತ್ತದೆ. ಈಗಾಗಲೇ ಪಟ್ಟಣದ ನಡುವಿನಕೇರಿ ಹಾಗೂ ಜೋಯಿಸರ ಕೇರಿಯಲ್ಲಿ ಚರಂಡಿ ಸ್ವಚ್ಛತೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ ವಾರ್ಡ್‌ಗಳ ಚರಂಡಿಗಳನ್ನು ಸ್ವಚ್ಛ ಮಾಡಲಾಗುವುದು ಎಂದರು.

ಪುರಸಭೆಯಿಂದ ಎಲ್ಲಾ ವಾರ್ಡ ಗಳಲ್ಲಿ ಆಯಾ ಸದಸ್ಯರ ಸಮ್ಮುಖ ದಲ್ಲಿ ಸಂಚರಿಸಿ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರೂ ಕೈ ಜೋಡಿಸಬೇಕು ಎಂದು ಅವರು ಕೋರಿದರು.

ಪುರಸಭಾ ಸದಸ್ಯ ಜಾಕೀರ್ ಹುಸೇನ್, ತಾರಾ ಹನುಮಂತಪ್ಪ,  ಡಿ.ಅಬ್ದುಲ್ ರಹಿಮಾನ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಇಂಜಿನಿಯರ್ ಸಿದ್ದೇಶ್ವರಸ್ವಾಮಿ ಸೇರಿದಂತೆ ಇತರರು ಇದ್ದರು.

error: Content is protected !!