ಮಲೆನಾಡಿನಲ್ಲಿ ಮಳೆ ಹೆಚ್ಚಳ ತುಂಗಾ ಜಲಾಶಯ ಭರ್ತಿ

ಮಲೆನಾಡಿನಲ್ಲಿ ಮಳೆ ಹೆಚ್ಚಳ ತುಂಗಾ ಜಲಾಶಯ ಭರ್ತಿ

ಶಿವಮೊಗ್ಗ, ಜು. 5 – ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬುಧವಾರ ಸಂಜೆ 1 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬೀಡಲಾಗಿದೆ. 

ಸಮುದ್ರ ಮಟ್ಟದಿಂದ 588.24 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿಗ 587.54 ಮೀಟರ್ ನಷ್ಟು ನೀರು ಸಂಗ್ರಹವಾಗಿದೆ. ಜಲಾಶಯ 5 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ ಎರಡು ಅಡಿ ಮಾತ್ರ ಬಾಕಿ ಇದ್ದು, ಮೇಲ್ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ನದಿಗೆ ನೀರು ಹರಿಸಲಾಗಿದೆ. 

ಒಳಹರಿವು ಹೆಚ್ಚಾದಂತೆ ಹೊರ ಹರಿವು ಸಹ ಹೆಚ್ಚಾಗಲಿದೆ, ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾ ಒಳ ಹರಿವು ಏರಿಕೆ : – ಭದ್ರಾ ಜಲಾ ನಯನ ಪ್ರದೇಶದಲ್ಲೂ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ಜಲಾಶಯಕ್ಕೆ ಬುಧವಾರ ಬೆಳಗಿನ ವರದಿ ಪ್ರಕಾರ 2397 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.

ಜಲಾಶಯದ ನೀರಿನ ಮಟ್ಟ 137ಅಡಿ 2 ಇಂಚು ಆಗಿದೆ. ಕಳೆದ ವರ್ಷ ಜಲಾಶಯದಲ್ಲಿ ಈ ದಿನ 158 ಅಡಿ 6 ಇಂಚು ನೀರಿತ್ತು. 

error: Content is protected !!