ಪ್ರತಿಯೊಬ್ಬರು ಪರಧರ್ಮಗಳ ಶ್ರೇಷ್ಠತೆ ತಿಳಿಯಬೇಕು : ಶಿವಶಂಕರ್

ಪ್ರತಿಯೊಬ್ಬರು ಪರಧರ್ಮಗಳ ಶ್ರೇಷ್ಠತೆ ತಿಳಿಯಬೇಕು : ಶಿವಶಂಕರ್

ಹರಿಹರ, ಜು. 6 – ಸಮಾಜ ಮತ್ತು ಸರ್ಕಾರ ಯಾವುದೇ ರೀತಿಯ ತಪ್ಪುಗಳನ್ನು ಮಾಡಿದಾಗ ನೇರವಾಗಿ ಹೇಳಿ ಅದನ್ನು ಸರಿ ದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪ್ರಬುದ್ಧತೆ ಬಹಳ ಮಹತ್ತರವಾದದ್ದು ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದ ದೇವಸ್ಥಾನ ರಸ್ತೆಯ ರೇಣುಕಾ ಮಂದಿರದ ಸಭಾಂಗಣದಲ್ಲಿ ನಡೆದ ಆಷಾಢ ಮಾಸದ ಇಷ್ಟಲಿಂಗ ಪೂಜೆ ಮತ್ತು ಧರ್ಮ ಜಾಗೃತಿ, ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಗಳು ಸಮಾಜ ಸುಧಾರಣೆಗಾಗಿ ಪೂಜೆ, ಬೋಧನೆ, ಧಾರ್ಮಿಕ ಹಾಗೂ ಸಾಮಾಜಿಕ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಭಾವಿಸುತ್ತಾರೆ. ಇದರ ಜೊತೆಗೆ, ಪರಧರ್ಮಗಳ ಶ್ರೇಷ್ಠತೆಯನ್ನೂ ತಿಳಿಯಬೇಕು ಎಂದವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ಎಸ್.ಎಂ. ವೀರೇಶ್ ಮಾತನಾಡಿ, ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಇದ್ದರೂ, ಮನಸ್ಸಿಗೆ ಶಾಂತಿಯ ಕೊರತೆ ಹೆಚ್ಚಾಗಿದೆ. ಅದನ್ನು ನಿವಾರಿಸಲು ಪಂಚಪೀಠದ ಸ್ವಾಮಿಗಳು ಶ್ರಮಿಸುತ್ತಿದ್ದಾರೆ ಎಂದರು.

ಈ ವೇಳೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ.  ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕಣ್ವಕುಪ್ಪೆ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನವಲಿಕಟ್ಟಿಮನೆ ಹಿರೇಮಠ ಹಂಪಸಾಗರ, ಮಾನವ ಗಣಕ ಯಂತ್ರ ಖ್ಯಾತಿಯ ಬಸವರಾಜ್ ಉಮ್ರಾಣಿ, ಕದಳಿ ವೇದಿಕೆಯ ಅಧ್ಯಕ್ಷೆ ಕೆ.ಸಿ.‌ಶಾಂತಕುಮಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ಗಜಾಪುರದ ವೀರಯ್ಯ, ಎನ್.ಹೆಚ್. ಪಾಟೀಲ್, ಜುಂಜಪ್ಪ ಹೆಗ್ಗಪ್ಪ, ಡಾ. ಎಸ್.ಕೆ. ನಾಗರಾಜ್, ಹೆಚ್.ಕೆ. ಶಿವಣ್ಣ, ನಗರಸಭೆ ಸದಸ್ಯರಾದ ಲಕ್ಷ್ಮಿ ಮೋಹನ್, ವಿರುಪಾಕ್ಷಪ್ಪ, ಉಪನ್ಯಾಸಕ ಕೆ.ಕೆ.‌ವಜ್ರೇಶ್, ಗುರುಬಸವರಾಜಯ್ಯ, ಕಂಚಿಕೇರಿ ಕರಿಬಸಪ್ಪ, ಶಿವಯೋಗಿ ಸ್ವಾಮಿ ಕತ್ತಲಗೇರಿ, ಗದಿಗೆಯ್ಯ ಸ್ವಾಮಿ, ಸಿದ್ದಲಿಂಗಸ್ವಾಮಿ, ಪೋಟೋ ಕೊಟ್ರೇಶ್ ಇತರರು ಹಾಜರಿದ್ದರು.

error: Content is protected !!