ದಾವಣಗೆರೆ, ಜು. 3- ಅಭಿವೃದ್ಧಿ ಸಂಸ್ಥೆಯಿಂದ ನಗರದ ಪೂಜಾ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಆಷಾಢ ಮಾಸ, ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ `ಸಿಲ್ಕ್ ಇಂಡಿಯ-2023′ ಮೇಳ ಆಯೋಜಿಸಲಾಗಿದೆ.
ಇದೇ ದಿನಾಂಕ 6 ರಿಂದ 11ರವರೆಗೆ 6 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ.
ತಸ್ಸರ್ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ, ಧರ್ಮಾವರಂ, ಕಾಂಚಿಪುರಂ, ರಾ ಸಿಲ್ಕ್ ಮತ್ತು ಕೋಸಾ, ಕೊಲ್ಕೊತ್ತಾ ಗಣಪತಿ, ಢಾಕ, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಾಲು ಚೆರಿ ರೇಷ್ಮೆ, ಮಟ್ಕಾ, ಪ್ರಿಂಟೆಡ್, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್ಗಳು, ಬಾಗಲ್ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮಲ್ಬೆರಿ ಸಿಲ್ಕ್, ಕೊಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಾ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿವೆ.
ಈ ಪ್ರದ ರ್ಶನದಲ್ಲಿ 23 ರಾಜ್ಯಗಳ ರೇಷ್ಮೆ ಸೀರೆಗಳಿರುತ್ತವೆ.
ಜೊತೆಗೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್ಗಳು ಮತ್ತು ಬೆಡ್ಶೀಟ್ಗಳು ಇರಲಿವೆ.