ಮಕ್ಕಳಿಗೆ ಹಣ, ಆಸ್ತಿ ಮಾಡಿ ; ಆದರೆ ಮಮಕಾರ ಬೇಡ : ಶ್ರೀ ಮಲ್ಲಯ್ಯಜ್ಜ

ಮಕ್ಕಳಿಗೆ ಹಣ, ಆಸ್ತಿ ಮಾಡಿ ; ಆದರೆ ಮಮಕಾರ ಬೇಡ : ಶ್ರೀ ಮಲ್ಲಯ್ಯಜ್ಜ

ರಾಣೇಬೆನ್ನೂರು,ಜು.3- ಮಕ್ಕಳನ್ನು ಚೆನ್ನಾಗಿ ಬೆಳೆಸಿರಿ, ಅವರಿಗೆ ಆಸ್ತಿ ಮಾಡಿರಿ, ಅವರು ಸುಖವಾಗಿ ಜೀವನ ನಡೆಸಲಿ. ಆದರೆ ನೀವು ಮಮಕಾರ ಇಟ್ಟುಕೊಳ್ಳಬೇಡಿ. ಮಮಕಾರ ನಿಮ್ಮನ್ನು ಪಾಪದೆಡೆಗೆ ಒಯ್ಯಲಿದೆ ಎಂದು ಸಿದ್ದಾರೂಢ ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ನುಡಿದರು.

ಶ್ರೀ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀ ಗಳು ಆಶೀರ್ವಚನ ನೀಡಿದರು. 

ಪಾಪ, ಪುಣ್ಯ ಎರಡು ಮನಸ್ಸಿನಲ್ಲಿವೆ. ಮನಸ್ಸು ಹೇಳಿದಂತೆ ಕೇಳಿದರೆ ಮೋಹ, ಮದ, ಮತ್ಸರಗಳೊಂದಿಗೆ ಪಾಪ ಮಾಡಲು ಪ್ರೇರೇಪಿಸುತ್ತದೆ. ಗುರುವಿನ ಮಾರ್ಗದರ್ಶನ ಪಡೆದು ಪುಣ್ಯವಂತರಾಗಿ ಬಾಳಬೇಕು ಎಂದು ಮಲ್ಲಯ್ಯಜ್ಜ ಹೇಳಿದರು.

ಸಂತರು, ಶರಣರು ಸೇರಿದಂತೆ ಜನ್ಮ ಪಡೆದ ಪ್ರತಿಯೊಬ್ಬರಿಗೂ ಗುರುವಿದ್ದಾನೆ. ಗುರುವಿನ ಮಾರ್ಗ ದರ್ಶನ ಪಡೆದು ಸನ್ಮಾರ್ಗದತ್ತ ನಡೆದರೆ ಪಾಪ ನಿಮ್ಮಿಂದ ದೂರವಾಗಿ ಪುಣ್ಯ ನಿಮ್ಮ ಬದುಕನ್ನು ಸಾರ್ಥಕ ಪಡಿಸುತ್ತದೆ. ಗುರು ಪೂಜೆಯೊಂದಿಗೆ ಬದುಕನ್ನು ಸಾರ್ಥಕ ಪಡಿಸಿಕೊಂಡ ವರು ಜಗತ್ತಿನಾದ್ಯಂತ ಬಹಳಷ್ಟು ಶರಣರು, ಮಹಾತ್ಮರು ಆಗಿಹೋಗಿದ್ದಾರೆ ಎಂದು ಮಲ್ಲಯ್ಯಜ್ಜ ನುಡಿದರು. 

ಕರಬಸಪ್ಪ ಹಳ್ಳಳ್ಳಿ, ದೇವೇಂದ್ರಪ್ಪ, ಪೂರ್ಣಿಮಾ ಅಯ್ಯನಗೌಡ್ರ, ಎರೇಸೀಮಿ, ಪೂರ್ಣಿಮಾ ಕುರವತ್ತಿ, ಕರಬಸಪ್ಪ ಮಲ್ಲಾಡದ, ಕುಮಾರ ಹಾಲುಮತ, ಶೈಲಶ್ರೀ ಬಣಕಾರ, ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ನಿಟ್ಟೂರು ರಾಮಪ್ಪ, ಪ್ರಕಾಶ ಜಿಗಳಿ, ರಾಣೇಬೆನ್ನೂರು,  ಜಿಗಳಿ  ಇನ್ನಿತರೆ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

error: Content is protected !!