ಸರ್ಕಾರಿ ಬಸ್ ಸೌಕರ್ಯಕ್ಕಾಗಿ ಆಗ್ರಹಿಸಿ ರೈತ ಸಂಘಟನೆ ಪ್ರತಿಭಟನೆ

ಸರ್ಕಾರಿ ಬಸ್ ಸೌಕರ್ಯಕ್ಕಾಗಿ ಆಗ್ರಹಿಸಿ ರೈತ ಸಂಘಟನೆ ಪ್ರತಿಭಟನೆ

ಜಗಳೂರು,ಜು.3- ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಕರ್ಯಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಬಣದ  ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಬೈಕ್ ರಾಲಿಯೊಂದಿಗೆ ಹೊರಟ ಪ್ರತಿಭಟನಾಕಾರರು, ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಲಿಖಿತ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಗೌರವಾಧ್ಯಕ್ಷ  ಗಂಗಾಧರಪ್ಪ ಮಾತನಾಡಿ, ಸ್ವಾತಂತ್ರ್ಯ ದೊರೆತು 7 ದಶಕಗಳು ಕಳೆದರೂ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ  ಕಾಣದೆ 2ಕೀ.ಮೀ  ರಸ್ತೆಯಲ್ಲಿ ಕಾಲ್ನಡಿಗೆಯಿಂದ ಆಗಮಿಸಿ ಬಸ್ ಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.ಇದರಿಂದ ಕಾಲೇಜು ವಿದ್ಯಾರ್ಥಿಗಳು, ವಯೋವೃದ್ದರು, ಮಹಿಳೆಯರು ಬಳಲಿ ಬಸವಳಿದು ಹೋಗಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ  ಗಮನಹರಿಸಿಲ್ಲ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್  ಮಾತನಾಡಿ, ತಾಲ್ಲೂಕಿನ ಕಣ್ವಕುಪ್ಪೆ, ಕೆಳ ಗೋಟೆ, ಚಿಕ್ಕಬನ್ನಿಹಟ್ಟಿ, ಗ್ರಾಮಗಳು ಕೊಂಡ ಕುರಿ  ಅರಣ್ಯ ಪ್ರದೇ ಶದ ಅಂಚಿನಲ್ಲಿದ್ದು, ಸಾರಿಗೆ ವ್ಯವಸ್ಥೆಯಿಲ್ಲ. ಮತ್ತೊಂದೆಡೆ ಕಾಲ್ನಡಿಗೆ ಮೂಲಕ ಸಂಚರಿಸಲು ಕರಡಿ, ಇತರೆ ಕಾಡು ಪ್ರಾಣಿಗಳ ಹಾವಳಿಯಿಂದ  ಭಯದ ವಾತಾವರಣದಲ್ಲಿ ಜನರು ಸಂಚರಿಸ ಬೇಕಿದೆ. ಕೂಡಲೇ ತಾಲ್ಲೂಕಿನಲ್ಲಿ ಅಗತ್ಯವಿರುವ ಪ್ರತಿ ಹಳ್ಳಿಗಳಿಗೆ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಚಿರಂಜೀವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ  ರಾಜು, ಮುಖಂಡರಾದ ಶರಣಪ್ಪ, ನಾಗರಾಜ್, ಅಂಜಿನಪ್ಪ, ಪಾಪಣ್ಣ, ಮಂಜಣ್ಣ, ಪ್ರಹ್ಲಾದಪ್ಪ, ರಂಗಪ್ಪ ಸೇರಿದಂತೆ ಭಾಗವಹಿಸಿದ್ದರು.

error: Content is protected !!