ಕಂದಾಯ ಇಲಾಖೆಯ ಕಾರ್ಯಕ್ಕೆ ಶಾಸಕ ಹರೀಶ್ ಮೆಚ್ಚುಗೆ
ಮಲೇಬೆನ್ನೂರು, ಜೂ. 30- ಗುಳದಹಳ್ಳಿ ಗ್ರಾಮದ ಸರ್ವೆ ನಂ. 22ರಲ್ಲಿರುವ ಗೋಮಾಳ ಜಾಗದಲ್ಲಿ ಅನಧಿ ಕೃತವಾಗಿ ವಾಸವಾಗಿದ್ದ 30 ಕುಟುಂಬಗಳಿಗೆ ಶುಕ್ರವಾರ ಶಾಸಕ ಬಿ.ಪಿ. ಹರೀಶ್ ಹಕ್ಕು ಪತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಹರೀಶ್ ಅವರು ಬಹಳ ವರ್ಷಗಳಿಂದ ಈ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನೆನೆಗುದಿಗೆಬಿದ್ದಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಹಕ್ಕುಪತ್ರ ವಿತರಣೆಗೆ ವ್ಯವಸ್ಥೆ ಮಾಡಿರುವುದನ್ನು ಶಾಸಕ ಹರೀಶ್ ಪ್ರಶಂಸಿಸಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ತಾ.ಪಂ. ಮಾಜಿ ಸದಸ್ಯ ಜಿ.ಸಿ. ಮಾಲತೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರಚಾರಿ, ಎಂ.ಬಿ. ಉಮೇಶ್, ಶ್ರೀಮತಿ ಲಕ್ಷ್ಮಿ ಮಂಜಪ್ಪ, ಪಿಡಿಓ ಶಾಂತಪ್ಪ, ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷ ನಾಗರಾಜ್, ಹಿರಿಯರಾದ ಜಿ.ಎಂ. ಶೇಖರಪ್ಪ, ಜಿ.ಆರ್. ಲಚ್ಚಪ್ಪ ರೆಡ್ಡಿ, ಜಿ.ಎಸ್. ದೇವೇಂದ್ರಪ್ಪ, ಜಿ.ಎಸ್. ನಾಗರಾಜಪ್ಪ, ಜಿ.ಟಿ. ನಾಗರಾಜಪ್ಪ ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.