ಅಂಕ ಗಳಿಸಿ ಉದ್ಯೋಗ ಪಡೆಯುವುದಷ್ಟೇ ಜೀವನವಲ್ಲ

ಅಂಕ ಗಳಿಸಿ ಉದ್ಯೋಗ ಪಡೆಯುವುದಷ್ಟೇ ಜೀವನವಲ್ಲ

ಹರಿಹರದ ಎಸ್.ಜೆ.ವಿ.ಪಿ ಪದವಿ ಕಾಲೇಜಿನಲ್ಲಿ ಶಿವಮೊಗ್ಗದ ಜಿ.ಎಸ್.ನಟೇಶ್ ಕಿವಿಮಾತು

ಹರಿಹರ, ಜೂ.30- ಇಂದಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಉದ್ಯೋಗ ಪಡೆಯುವುದೇ ಜೀವನ ಎಂದು ಭಾವಿಸಬಾರದು ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ಕಿವಿಮಾತು ಹೇಳಿದರು.

ಇಲ್ಲಿನ ಎಸ್.ಜೆ.ವಿ.ಪಿ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಮಾರೋಪ ಸಮಾರಂಭದ  ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.  

ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡಬೇಕು, ನಾಡು, ನುಡಿ ಕಟ್ಟುವಲ್ಲಿ ಪ್ರತಿಯೊಬ್ಬರು ನಿರಂತರ ಶ್ರಮ ಪಡುತ್ತಲೇ ಇರಬೇಕು. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಅತ್ಯಂತ ಆತ್ಮೀಯ ಸ್ನೇಹಿತನಂತೆ ಇರಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು  ಪ್ರಶಂಸಿಸಿದ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ್, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.  ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ನಿರ್ದೇಶಕ ಎನ್.ಎಂ.ತಿಪ್ಪೇಸ್ವಾಮಿ, ಎನ್.ಹೆಚ್.ಪಾಟೀಲ್, ಪ್ರಾಚಾರ್ಯ ಶ್ರೀಮತಿ ಶಿವಗಂಗಮ್ಮ, ಉಪನ್ಯಾಸಕರಾದ ಡಾ.ರಮೇಶ್ ಪರ್ವತಿ, ಡಾ.ದಿವಾಕರ್. ಡಿ.ಟಿ. ಮಂಜುನಾಥ್, ಭರಮಪ್ಪ, ಸಿದ್ದಯ್ಯ, ಮಂಜುನಾಥ್ ಸಜ್ಜನ್, ವಿಶಾಲ್ ಬೆಂಚ್ಚಳಿ, ಆಕಾಶ್, ನಳಿನಿ, ರಶ್ಮಿ , ನಾಜೀಯ ಬೇಗಂ, ಆಶಾ, ಪ್ರಿಯಾಂಕ  ಉಪಸ್ಥಿತರಿದ್ದರು.  ಐ.ಕ್ಯೂ.ಎ.ಸಿ ಸಂಯೋಜಕ  ಡಾ.ವೀರಣ್ಣ ಶೆಟ್ಟರ್ ವಾರ್ಷಿಕ ವರದಿ  ಓದಿದರು.

error: Content is protected !!