ದಾವಣಗೆರೆ, ಜೂ. 30- ಏಕಾಗ್ರತೆ ಹೇಗೆ ಹೆಚ್ಚಾಗುತ್ತದೆ, ದೀರ್ಘ ಉಸಿರಾಟದ ಲಾಭಗಳನ್ನು, ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸುಲಭ, ದೀರ್ಘ ಉಸಿರಾಟ ವಿಧಾನಗಳನ್ನು, ಪರೀಕ್ಷಾ ಭಯ ನಿವಾರಿಸಲು, ಸುಲಭವಾಗಿ ಓದುವ ವಿಧಾನಗಳು ಕಡಿಮೆ ಅವಧಿಯಲ್ಲಿ ಹೇಗೆ ಅಭ್ಯಾಸ ಮಾಡಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಅಂತರರಾಷ್ಟ್ರೀಯ ಯೋಗ ಗುರು, ವ್ಯಕ್ತಿತ್ವ ವಿಕಸನ ತರಬೇತುದಾರರಾದ ಗೀತಮ್ಮಾಜಿ ತಿಳಿಸಿದರು.
ನಗರದ ಸೋಮೇಶ್ವರ ವಿದ್ಯಾಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನದ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಸ್ಮರಣಶಕ್ತಿ, ಏಕಾಗ್ರತೆ, ಮನಸ್ಸಿನ ನಿಗ್ರಹಕ್ಕೆ ಸುಲಭ ಆಕ್ಯುಪ್ರಷರ್ ಚಿಕಿತ್ಸೆಯ ಬಗ್ಗೆ ಗೀತಮ್ಮಾಜಿ ಪ್ರಾಯೋಗಿಕವಾಗಿ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಆಶ್ಚರ್ಯ ಚಕಿತರನ್ನಾಗಿಸಿದರು.