ದಾವಣಗೆರೆ, ಜೂ. 30- ಮಕ್ಕಳು ಕುಟುಂಬದ ಆಸ್ತಿಯಾದರೆ, ಗಿಡ-ಮರ ಪರಿಸರದ ಆಸ್ತಿ. ಹಿರಿಯರಾದ ನಾವುಗಳು ಪರಿಸರದ ಬಗ್ಗೆ ಪ್ರೀತಿ ಹೊಂದಬೇಕು. ಮಕ್ಕಳಿಗೆ ಗಿಡ-ಮರ ಬೆಳೆಸುವ ಹವ್ಯಾಸ ರೂಢಿಸಬೇಕು ಎಂದು ಪರಿಸರವಾದಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಹೇಳಿದರು.
ನಗರದ ಲೋಕಿಕೆರೆ ರಸ್ತೆಯ ರವೀಂದ್ರನಾಥ ಬಡಾವಣೆಯ ಸಿದ್ಧೇಶ್ವರ ಉದ್ಯಾನವನದಲ್ಲಿ ಬಡಾವಣೆಯ ನಾಗರಿಕರು ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನವರ ಪುತ್ರ ಉಮೇಶ್ ಬಳ್ಳೂರು, ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ವೀರಭದ್ರಪ್ಪ, ತಿಮ್ಮೇಶಪ್ಪ, ಮಹೇಶ್ವರಯ್ಯ, ಪಾಲಿಕೆ ಸದಸ್ಯೆ ಗೀತಾ ಅವರ ಪತಿ ನಾಗರಾಜ್, ಪರಿಸರ ಪ್ರೇಮಿಗಳಾದ ಸುರೇಶ್ ಚಾವಡಿ, ನಾಗರಾಜ್ ಸಿರಿಗೆರೆ, ಜಯ್ಯಪ್ಪ, ಮಾಲತೇಶ್, ಶ್ರೀನಿವಾಸರೆಡ್ಡಿ, ಶೇಖರಪ್ಪ, ಜಿ.ಟಿ. ನಾಗರಾಜ್, ಬಸವರಾಜ್ ಐಗೂರು, ಶೈಲಜಾ, ಉಷಾ, ಪ್ರೇಮ, ಶೋಭ, ವೇದ, ಶಶಿಕಲಾ, ಉಮಾ ಮತ್ತಿತರರು ಭಾಗವಹಿಸಿದ್ದರು.