ಐಎಂಎ ಮಹಿಳಾ ವಿಭಾಗದಿಂದ `ನಿತ್ಯ ಜೀವನದಲ್ಲಿ ಸಂಗೀತ’ ಉಪನ್ಯಾಸ

ಐಎಂಎ ಮಹಿಳಾ ವಿಭಾಗದಿಂದ `ನಿತ್ಯ ಜೀವನದಲ್ಲಿ ಸಂಗೀತ’ ಉಪನ್ಯಾಸ

ದಾವಣಗೆರೆ, ಜೂ. 26- ನಗರದ ಐಎಂಎ ಮಹಿಳಾ ವಿಭಾಗದಿಂದ ಈಚೆಗೆ ಐಎಂಎ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ವಿತರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯ ಪೂರ್ವಭಾವಿಯಾಗಿ ನಿತ್ಯ ಜೀವನದಲ್ಲಿ ಸಂಗೀತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನಿತ್ಯ ಜೀವನದಲ್ಲಿ ಸಂಗೀತ  ಕಲಿಕೆ ವಿಷಯ ಕುರಿತು ನಗರದ ಮಹತಿ ಸಂಗೀತ ವಿದ್ಯಾಲಯದ ವಿದ್ವಾನ್ ಎಂ.ದ್ವಾರಕೀಶ್ ಮಾತನಾಡುತ್ತಾ, ಸಂಗೀತ ಕಲಿಕೆಯನ್ನು ಮಾಡುವುದರಿಂದ ಮನುಷ್ಯನ ಮಾನಸಿಕ ಮತ್ತು ಬೌದ್ಧಿಕ ವಿಕಾಸ ಹೆಚ್ಚಾಗುವುದು. ಸಂಗೀತ ಕಲಿಕೆಯಿಂದ ದೊರಕುವ ಜೀವನ ಮೌಲ್ಯಗಳು, ಸಂಗೀತ ಶಿಕ್ಷಣ ಪದ್ಧತಿ, ಸಂಗೀತದ ಕಲಿಕೆಯ ಮೂಲಕ ಭೌತಶಾಸ್ತ್ರ, ಗಣಿತ ಶಾಸ್ತ್ರ, ವ್ಯಾಕರಣ, ಶಿಲ್ಪ ಶಾಸ್ತ್ರದಲ್ಲಿ ಸಂಗೀತ ವೈಶಿಷ್ಟ್ಯ, ಸಂಗೀತ ಕಲಿಕೆಗೆ ಅವಶ್ಯಕ ಗುಣಗಳು, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು.

 ಶ್ರೀಮತಿ ತುಳಸೀ ಮಹೇಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಲೋಚನಾ ಉಮಾಕಾಂತ್ ಸುಭಾಷಿತ ವಾಚನ ಮಾಡಿದರು. ಶ್ರೀಮತಿ ಸವಿತಾ ಕೂಲಂಬಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಗೀತಾ ರಾಜು ಬಹುಮಾನ ವಿತರಣೆ ಮಾಡಿದರು. ಶ್ರೀಮತಿ ಶಿವಪ್ರಭಾ ದೊಡ್ಡಿಕೊಪ್ಪ ವಂದಿಸಿದರು.

error: Content is protected !!