ದಾವಣಗೆರೆ, ಜೂ. 26- ಅನ್‍ಮೋಲ್ ಪಬ್ಲಿಕ್ ಶಾಲೆಯಲ್ಲಿ 9ನೇ ವರ್ಷದ ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯೋಗ ತರಬೇತುದಾರರಾದ ಕು. ಹರ್ಷಿತಾ ಎಂ.ಜಾಧವ್ ಮಾತನಾಡಿ, ಯೋಗವು ನಮ್ಮನ್ನು ವಿಷದಿಂದ ಮುಕ್ತಗೊಳಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅಲ್ಲದೆ ನಮ್ಮ ಆತ್ಮ, ದೇಹದ ಸೌಂದರ್ಯವನ್ನು ಕಾಪಾಡುತ್ತದೆ. ಇಂದಿನ ಒತ್ತಡದ ಜೀವನಕ್ಕೆ ಯೋಗ ಒಂದೇ ಮದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್ ವಹಿಸಿಕೊಂಡಿದ್ದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಭೈರೇಶ್, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಎಸ್ ಚಿದಾನಂದ್, ಶಾಲೆಯ ಪ್ರಾಂಶುಪಾಲ ಕೊಟ್ರೇಶ್ ಯು. ಹಾಗೂ ಇತರರು ಭಾಗವಹಿಸಿದ್ದರು.