ರಾಣೇಬೆನ್ನೂರು : ಖನ್ನೂರ್ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ರಾಣೇಬೆನ್ನೂರು : ಖನ್ನೂರ್ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ರಾಣೇಬೆನ್ನೂರು, ಜೂ. 25- ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ 9 ನೇ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಎಂ.ಎಂ. ಖನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಶ್ವಯೋಗ ದಿನಾಚರ ಣೆಯ ಪ್ರಯುಕ್ತ ನಗರದ ಪೋಸ್ಟ್ ಸರ್ಕಲ್, ಸಂಗಮ ಸರ್ಕಲ್‌ನಲ್ಲಿ ರಾಲಿ ಮತ್ತು ಯೋಗಾಸನಗಳನ್ನು ಪ್ರದರ್ಶಿಸುವುದರ ಮೂಲಕ ಜನರಲ್ಲಿ ಯೋಗಾಸನದ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿದರು.

ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಸುಲೋಚನ ಎಂ. ಖನ್ನೂರ, ಛೇರ್ಮನ್  ಡಾ. ಪ್ರವೀಣ ಎಂ. ಖನ್ನೂರ, ಸಿಇಓ ಡಾ. ಶೈಲಶ್ರೀ ಪಿ. ಖನ್ನೂರ, .  ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸಮೀರಾ ಫರ್ನಾಂಡೀಸ್, ಪಿ.ಯು. ಕಾಲೇಜ್ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಮೇಘನಾ ಸ್ವಾಗತಿಸಿದರು. ಡಾ.ಶೈಲಶ್ರೀ ಪಿ. ಖನ್ನೂರ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ರಿತಿಕಾ ಮತ್ತು ರೋಷಿಣಿ ನಿರೂಪಿಸಿದರು.  ವರ್ಷಾ ಭೋವಿ ವಂದಿಸಿದರು.

error: Content is protected !!