ಮಾಗನೂರು ಬಸಪ್ಪ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ಮಾಗನೂರು ಬಸಪ್ಪ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ದಾವಣಗೆರೆ, ಜೂ.25- ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲ್ ಸಮುಚ್ಛಯದಲ್ಲಿ ವಿದ್ಯುನ್ಮಾನ ಮತ ಯಂತ್ರದ ಮೂಲಕ ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲಾಯಿತು.

ಶಾಲೆಯೊಂದರ ವಿದ್ಯಾರ್ಥಿ ಸಂಘದ ಚುನಾವಣೆಯು ನಗರದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುನ್ಮಾನ ಮತ ಯಂತ್ರದ ಮೂಲಕ ನಡೆಸಲಾಯಿತು. ಚುನಾವಣಾ ಮತದಾನ ಮಾಡಲು ಮತದಾನದ ಯಂತ್ರದ ಅಪ್ಲಿಕೇಷನ್ ಸಾಫ್ಟ್‌ವೇರ್‍ನಲ್ಲಿ ಚುನಾವಣೆ ನಡೆಸಲಾಯಿತು. 

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡರು, ಶಾಲಾ ಮುಖ್ಯಸ್ಥರುಗಳಾದ ಎಸ್.ಆರ್. ಶಿರಗಂಬಿ, ಕುಸುಮ.ಎ.ಎಸ್, ಮಂಜುನಾಥ್ ಎಸ್. ಅವರುಗಳು ಮಕ್ಕಳಿಗೆ ಶುಭ ಕೋರಿ `ನಿಮ್ಮ ಮತ ನಿಮ್ಮ ಅಮೂಲ್ಯ ಹಕ್ಕು’ ಅದನ್ನು ಸಮರ್ಥ ನಾಯಕರಿಗೆ ಚಲಾಯಿಸಿ ಎಂದು ಕರೆಕೊಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

error: Content is protected !!