ಜಗದಂಬರ ಭಗತ ಸೇವಾ ಬಂಜಾರ ಆಲ್ಬಂ ಸಾಂಗ್ ಪೋಸ್ಟರ್ ಬಿಡುಗಡೆ

ಜಗದಂಬರ ಭಗತ ಸೇವಾ ಬಂಜಾರ ಆಲ್ಬಂ ಸಾಂಗ್ ಪೋಸ್ಟರ್ ಬಿಡುಗಡೆ

ದಾವಣಗೆರೆ, ಜೂ. 25 – ನೂತನ ಬಂಜಾರ ಆಲ್ಬಂ ಸಾಂಗ್ ‘ಜಗದಂಬರ ಭಗತ ಸೇವಾ’ ಪೋಸ್ಟರ್ ಬಿಡುಗಡೆಯಾಗಿದೆ. ಧರ್ಮಸ್ಥಳದ   ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸುರೇಂದ್ರ ಕುಮಾರ್ ಜೈನ್ ಅವರು ಪೋಸ್ಟರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

`ಜಗದಂಬರ ಭಗತ ಸೇವಾ’ ದಾವಣಗೆರೆಯ ಯುವ ಪ್ರತಿಭೆಗಳೆಲ್ಲ ಒಟ್ಟಿಗೆ ಸೇರಿ ಮಾಡಿರುವ ಹೊಸತನದ ಬಂಜಾರ ಆಲ್ಬಂ ಸಾಂಗ್ ಇದಾಗಿದ್ದು, ರತ್ನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತಿಲಕ್ ರತ್ನು ಹಾಗೂ ಶೀತಲ್ ಬಂಜಾರರವರ ನಿರ್ಮಾಣದಲ್ಲಿ ಆಲ್ಬಂ ಸಾಂಗ್ ನಿರ್ಮಾಣಗೊಂಡಿದೆ.

ಈ ಹಾಡಿಗೆ ಕುಬೇರ ನಾಯ್ಕ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ನೀಡಿದ್ದು, ಅಜಯ್ ವಾರಿಯರ್ ಅವರ ಗಾಯನವಿದೆ. ಮನು ಖಿಮಾವತ್ ಮತ್ತು ರಂಗನಾಥ್ ಎಸ್. ನಾಯ್ಕ್ ನಿರ್ದೇಶನ ಮಾಡಿದ್ದು, ಛಾಯಾಗ್ರಹಣ ಹಾಗೂ ಸಂಕಲನವನ್ನು ಲಿಂಗರಾಜ್ ಸಿ.ಕೆ ಮಾಡಿದ್ದಾರೆ. ಶ್ರೀ ಸಂತ ಸೇವಾಲಾಲ್ ಅವರ ಜನ್ಮ ಸ್ಥಳವಾದ ಸೂರನಗೊಂಡನಕೊಪ್ಪ, ಹೊನ್ನಾಳಿಯ ತುಂಗ ಭದ್ರ ನದಿ ಹಾಗೂ ಕಾರಿಗನೂರು ಫಾಲ್ಸ್ ನ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ತಾರಾಗಣದಲ್ಲಿ ಶೀತಲ್ ಜಿ.ನಾಯ್ಕ್‌ ಅವರು ಶ್ರೀ ಸಂತ ಸೇವಾಲಾಲ್ ಮಹಾರಾಜರ ಭಕ್ತನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಹ ಕಲಾವಿದರಾಗಿ ತಿಲಕ್ ರತ್ನು, ಅರುಣ್ ಕಮಾರ್, ನಿಹಾರಿಕ, ಸಂಗೀತ, ನಿಮಿತಾ, ಅಭಿ ಬಂಜಾರ, ಸುಪ್ರೀತಾ, ಅನುಷಾ, ಧನರಾಜ್, ಲೋಹಿತ್, ದತ್ತಾತ್ರೆಯಾ ಸೇರಿದಂತೆ ಮುಂತಾದವರಿದ್ದಾರೆ.

ಹಾಡಿನ ಶೀರ್ಷಿಕೆ: `ಸೂರಜ ನಿಸರಗೊ ಆರೇ, ಜಗದಂಬರ ಭಗತ ತೂರೆ, ಫಲ ಫುಲ ಚಡಾವು ಮ ತೋನರೆ’ ಭಕ್ತರು ತಮ್ಮ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ಅವರಿಗೆ ಭಕ್ತಿ ಪೂರ್ವಕವಾಗಿ ನಮಿಸುತ್ತಾ ಸೂರ್ಯನು ಉದಯವಾದನು ಜಗದಂಬರ ಭಕ್ತನೇ ಬಾ. ನಿನಗೆ ಫಲ ಪುಷ್ಪಗಳಿಂದ ನೈವೇದ್ಯ ಮಾಡುವೆವು ಎಂಬುದು ಈ ಹಾಡಿನ ಕಥಾವಸ್ತು ಎನ್ನಲಾಗಿದೆ.

error: Content is protected !!