ಶಾಸಕ ಬಿ.ಪಿ. ಹರೀಶ್
ಹರಿಹರ, ಜೂ 25 – ಮಡಿವಾಳ ಸಮಾಜವು ಸಮಾಜದಲ್ಲಿ ಇತರರಂತೆ ಬಲಗೊಳ್ಳಲು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಸಮಾಜದ ಎಲ್ಲರೂ ಪ್ರಯತ್ನಿಸಬೇಕು. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಸಮಾಜದ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಲು ಆಸಕ್ತರು ಮುಂದಾದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸುತ್ತೇನೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಹೊಸಪೇಟೆ ಬೀದಿಯಲ್ಲಿರುವ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಭವನದಲ್ಲಿ ತಾಲ್ಲೂಕು ಮಡಿವಾಳ ಸಮಾಜದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಗುತ್ತೂರು ಚಂದ್ರಪ್ಪ ಮಡಿವಾಳರ ಮಾತನಾಡಿ, ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕೆಲಸ ಮಾಡಬೇಕು ಮತ್ತು ನಮ್ಮ ಸಮಾಜಕ್ಕೆ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಅನುದಾನ ಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್, ಮುಖಂಡರಾದ ಚಂದ್ರಶೇಖರ ಪೂಜಾರ್, ನಗರಸಭೆ ಸದಸ್ಯ ವಿಜಯ ಕುಮಾರ್, ಬಿಜೆಪಿ ನಗರ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್, ಕೆಂಚನಹಳ್ಳಿ ಮಹಾಂತೇಶಪ್ಪ, ಬಾತಿ ಚಂದ್ರಶೇಖರ್, ಐರಣಿ ಅಣ್ಣೇಶ್, ಪತ್ರಕರ್ತ ಲೋಕಿಕೆರೆ ಅಣ್ಣಪ್ಪ (ಮಡಿವಾಳರ) ಅವರನ್ನು ತಾಲ್ಲೂಕು ಮಡಿವಾಳ ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಂ. ಹೆಚ್. ಭೀಮಣ್ಣ. ಗೌರವಾಧ್ಯಕ್ಷ ಬಸವರಾಜಪ್ಪ. ಉಪಾಧ್ಯಕ್ಷರಾದ ಕುಣೆಬೆಳಕೇರಿ ಮಲ್ಲೇಶಪ್ಪ, ಈಶಪ್ಪ, ಕಾರ್ಯದರ್ಶಿ ರಂಗನಾಥ ಕೊಮಾರನಹಳ್ಳಿ, ಗುತ್ತೂರು ಪುಲಕೇಶಿ, ಪ್ರಕಾಶ ಆರ್.ಕೆ, ಮಲೇಬೆನ್ನೂರು ಹನುಮಂತಪ್ಪ, ಕೊಮಾರನಹಳ್ಳಿ ಎಂ.ಆರ್ ಬಸವರಾಜ್, ಮಲೇಬೆನ್ನೂರು ಪಟ್ಟಣ ಪಂಚಾಯತಿ ಸದಸ್ಯ ಪಿ.ರಾಜು, ರವಿಕುಮಾರ, ಡಿ.ಚಂದ್ರು, ಅರ್ಜುನ್, ಮಾರುತಿ, ಹಾಲೇಶ್ ಹಾಗೂ ತಾಲ್ಲೂಕು ಮಡಿವಾಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.