ಎಚ್ಚರ ವಹಿಸಿ ಮಲೇರಿಯಾದಿಂದ ಪಾರಾಗಲು ಕರೆ

ಎಚ್ಚರ ವಹಿಸಿ ಮಲೇರಿಯಾದಿಂದ ಪಾರಾಗಲು ಕರೆ

ಚಳ್ಳಕೆರೆ, ಜೂ. 22- ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೀರಾಸಾಬಿಹಳ್ಳಿ ವ್ಯಾಪ್ತಿಗೆ ಬರುವ ತರೀಕೆರೆ ಗ್ರಾಮದ ಎನ್ಎಸ್‌ವಿಕೆ ಪ್ರೌಢಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ, ನವೀನ ವಿಧಾನ ಅಳವಡಿಸಿ ಅನುಷ್ಠಾನಗೊಳಿಸೋಣ. ಘೋಷಣೆಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎನ್. ನವೀನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಲೇರಿಯಾ ಜ್ವರ ಹೆಣ್ಣು ಅನಫಿಲಿಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಈ ಸೊಳ್ಳೆ ಕೆರೆ, ಕಟ್ಟೆ, ಬಾವಿ,ಕೃಷಿ ಹೊಂಡ, ಚೆಕ್‌ಡ್ಯಾಂ ಮುಂತಾದ ನೀರು ಇರುವ ದೊಡ್ಡ ದೊಡ್ಡ ಸ್ಥಳಗಳಲ್ಲಿ ತನ್ನ ಸಂತಾನ ಉತ್ಪತ್ತಿ ಮಾಡಿ ಮನುಷ್ಯರಿಗೆ ಕಚ್ಚುವುದರ ಮೂಲಕ ಮಲೇರಿಯಾ ಹರಡುತ್ತದೆ. ಚಳಿ, ವಿಪರೀತ ಜ್ವರ,ಸುಸ್ತು ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶಕುಂತಲಮ್ಮ, ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸ್ನೇಹ, ಶಬೀನ ಬಾನು, ಎನ್‌ಎಸ್‌ವಿಕೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಲಿಂಗಪ್ಪ, ಸಹ ಶಿಕ್ಷಕರಾದ ಗುರುಮೂರ್ತಿ, ಸುನೀಲ್, ಕುಮಾರ್, ರಾಜು, ಜ್ಯೋತಿ, ರೋಜಾ ಉಪಸ್ಥಿತರಿದ್ದರು.

error: Content is protected !!