ಸಿದ್ದಾರೂಢ ಪರಂಪರೆಯ ಮಠಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ

ಸಿದ್ದಾರೂಢ ಪರಂಪರೆಯ ಮಠಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ

ಐರಣಿ ಹೊಳೆಮಠದಲ್ಲಿ ನಡೆದ ಮುಪ್ಪಿನಪ್ಪಜ್ಜನ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ

ರಾಣೇಬೆನ್ನೂರು, ಜೂ. 22- ಸಿದ್ದಾರೂಢ ಪರಂಪರೆಯ ಮಠಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ಇಲ್ಲಿ ನಡೆಯುವ ಸಮಾರಂಭಗಳಲ್ಲಿ ಎಲ್ಲಾ ಸಮಾ ಜಗಳ ಗುರುಗಳು, ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಮದುವೆ ಆಗುವ ದಂಪತಿಗಳು ಪುಣ್ಯವಂತರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ ಹೇಳಿದರು.

ತಾಲ್ಲೂಕಿನ ಐರಣಿ ಹೊಳೆಮಠದಲ್ಲಿ ನಡೆದ ಮುಪ್ಪಿನಪ್ಪಜ್ಜನ ಪುಣ್ಯಾರಾಧನೆ, ತುಲಾಭಾರ, ಸಾಮೂಹಿಕ ವಿವಾಹ, ರಥೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇಶದಲ್ಲಿ ಶಾಂತಿ, ಸುವ್ಯವಸ್ಥೆಗೆ ನೀವು ನಮ್ಮನ್ನು ಬೆಂಬಲಿಸ ಬೇಕಿತ್ತು. ದೇಶದ ಪ್ರಗತಿ ಬಗ್ಗೆ ಪ್ರತಿಯೊ ಬ್ಬರೂ ಜವಾಬ್ದಾರಿಯುತವಾಗಿ ಚಿಂತಿಸ ಬೇಕಿದೆ. ಈಗ ಮಾಡಿದ ತಪ್ಪನ್ನು ಮುಂದೆ ಮಾಡಬೇಡಿ. ಬರುವ ಚುನಾವಣೆಗಳಲ್ಲಿ ನಮಗೆ ಆಶೀರ್ವದಿಸಿರಿ ಎಂದರು.

ಮೂರು ವರ್ಷಗಳ ಹಿಂದೆ ಜನರು ಆಶೀರ್ವದಿಸಿದ್ದರು. ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನನಗೆ ಅವಕಾಶ ಕಡಿಮೆ ಇದ್ದರೂ ಸಹ ಅತ್ಯಂತ ಹೆಚ್ಚು ಸೇವೆ ಮಾಡಿದ ನೆಮ್ಮದಿ ಇದೆ. ಮುಂದೆ ನನಗೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ನನ್ನದು. ಸೋತರೂ ಸಹ ಐರಣಿ ಮಠದ ಸೇವೆಯಲ್ಲಿ ನಾನು ನಿರಂತರವಾಗಿರುತ್ತೇನೆ ಎಂದು ಅರುಣಕುಮಾರ ಹೇಳಿದರು.

ದಾವಣಗೆರೆ ಶಿವಾನಂದ ಶ್ರೀಗಳು, ಹದಡಿ ಮುರುಳೀಧರ ಶ್ರೀಗಳು, ಜೋಡಕುರುಳಿ ಚಿದ್ಘಾನಾನಂದ ಶ್ರೀಗಳು, ತೆಲಗಿ ಪೂರ್ಣಾನಂದ ಶ್ರೀಗಳು, ಹೋತನಹಳ್ಳಿ ಶಂಕರಾನಂದ ಶ್ರೀಗಳು, ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ರಾಣೇಬೆನ್ನೂರು ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಪವನ ಮಲ್ಲಾಡದ, ಸಿದ್ದು ಚಿಕ್ಕಬಿದರಿ ಆಗಮಿಸಿದ್ದರು.

ಮಠದ ಸಂಚಾಲಕ ಬಾಬು ಶೆಟ್ಟರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪೀಠಾಧಿಪತಿ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮಿಗಳ ತುಲಾಭಾರದ ನಂತರ ಆಶೀರ್ವಚನ ನೀಡಿದರು. ಕೊನೆಯಲ್ಲಿ ರಥೋತ್ಸವ ಕಾರ್ಯಕ್ರಮಗಳು ನಡೆದವು.

error: Content is protected !!