ಎಸ್ಎಸ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಸ್ಸೆಸ್ ಜನ್ಮದಿನ ಕಾರ್ಯಕ್ರಮ
ದಾವಣಗೆರೆ,ಜೂ.22- ನಗರದ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಎಸ್. ಎಸ್. ಆಸ್ಪತ್ರೆ ಆವರಣದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರ 93ನೇ ಹುಟ್ಟುಹಬ್ಬವನ್ನು ರೋಗಿಗಳಿಗೆ ಹಣ್ಣು ವಿತರಣೆ, ನೂತನ ಡಯಾಲಿಸಿಸ್ ಯಂತ್ರಗಳ ಅನಾವರಣ, ಸ್ವಯಂಪ್ರೇರಿತ ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ರಮ ಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
93ನೇ ವರ್ಷದ ಹುಟ್ಟುಹಬ್ಬದಂದು ‘93’ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಈ ರಕ್ತದಾನ ಶಿಬಿರದಲ್ಲಿ 65ಕ್ಕೂ ಹೆಚ್ಚ್ಚು ವೈದ್ಯಕೀಯ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಹಿರಿಯ ವೈದ್ಯರುಗಳಾದ ಡಾ. ಶಾಂತಲಾ ಅರುಣ್ ಕುಮಾರ್, ಡಾ. ಪ್ರವೀಣ್ ಕೆ, ಡಾ. ಸಂತೋಷ್ ಬೋಸ್ಲೆ, ಡಾ.ಮೃತ್ಯುಂಜಯ ಎನ್, ಡಾ. ಪ್ರದೀಪ್ ಬಿ.ಇ, ಡಾ. ಹರೀಶ್ ಕುಮಾರ್ ವಿ.ಎಸ್ ಮತ್ತು ಶುಶ್ರೂಷಕ ಸಿಬ್ಬಂದಿಗಳು ಹಾಗೂ ಇತರೆ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಉಪ ಪ್ರಾಂಶುಪಾಲರಾದ ಡಾ. ಶಶಿಕಲಾ ಪಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ರಕ್ತದಾನ ಕಾರ್ಯಕ್ರಮ ನಡೆಯಿತು.
ತಮ್ಮ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡ ಎಸ್ಸೆಸ್ ಅವರು ಕೇಕ್ ಕತ್ತರಿಸಿದರಲ್ಲದೇ, ಐದು ನೂತನ ಡಯಾಲಿಸಿಸ್ ಯಂತ್ರಗಳನ್ನು ಅನಾವರಣಗೊಳಿಸಿದರು.
ಬಾವಿಸಂ ಆಡಳಿತ ಮಂಡಳಿ ಸದಸ್ಯ ಸಂಪಣ್ಣ ಮುತಾಲಿಕ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್ ಪ್ರಸಾದ್ ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಎ, ನೆಫ್ರೋಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಜಿ. ಆರ್. ಕಾಲೇಜು ವಿದ್ಯಾರ್ಥಿ ಸಂಘದ ಚೇರ್ಮನ್ಡಾ. ಹರೀಶ್ ಕುಮಾರ್ ವಿ. ಎಸ್., ವಿದ್ಯಾರ್ಥಿ ಸಂಘದ ಕನ್ನಡ ಬಳಗ ವಿಭಾಗದ ಚೇರ್ಮನ್ ಡಾ. ಸಂತೋಷ್ ಬೋಸ್ಲೆ, ವಿದ್ಯಾರ್ಥಿ ಸಂಘದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಚೇರ್ಮನ್ ಡಾ. ರಾಘವೇಂದ್ರ ಎ.ವೈ ಹಾಗೂ ಇತರರು ಉಪಸ್ಥಿತರಿದ್ದರು.