ದಾವಣಗೆರೆ, ಜೂ. 22 -ಜಿಲ್ಲಾ ಮಹಿಳಾ ಗಾಣಿಗರ ಸಮಾಜದ ವತಿಯಿಂದ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸುಶೀಲಾ ಬಸವರಾಜ ಅವರು ಯೋಗದಿಂದ ಆಗುವ ಉಪಯೋಗಗಳ ಬಗ್ಗೆ ಮಾತನಾಡಿದರು. ಶ್ರೀಮತಿ ಪ್ರಭಾ ಜಯದೇವಪ್ಪ, ಲೀಲಾ ಮತ್ತು ಭಾರತಿ ಅವರುಗಳು ಯೋಗಾಸನ ಮಾಡಿ ಅದರಿಂದ ಆಗುವ ಉಪಯೋಗದ ಬಗ್ಗೆ ವಿವರ ನೀಡಿದರು. ಗಾಣಿಗರ ಸಮಾಜದ ಗೌರವ ಅಧ್ಯಕ್ಷ ಡಾ. ಜಿ.ಸಿ. ಬಸವರಾಜ್, ಉಪಾಧ್ಯಕ್ಷ ಡಾ. ಜೈದೇವಪ್ಪ, ಗಾಣಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಉಮಾ ವೀರಭದ್ರಪ್ಪ ಉಪಸ್ಥಿತರಿದ್ದರು.
January 13, 2025