ಬಿ.ಐ.ಇ.ಟಿಯಲ್ಲಿ ಹ್ಯಾಕಥಾನ್-2023

ಬಿ.ಐ.ಇ.ಟಿಯಲ್ಲಿ ಹ್ಯಾಕಥಾನ್-2023

ದಾವಣಗೆರೆ, ಜೂ. 22 – ಇಂದಿನ ದಿನಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಬಹಳ ಮುಂದುವರೆದಿದ್ದು, ವಿವಿಧ ಕಂಪ್ಯೂಟರ್ ಭಾಷೆಗಳಾದ  ಸಿ ++, ಪೈತಾನ್, ಒರಾಕಲ್, ಜಾವಾ, C++, Pythan,  Oracle, Advanced Java) ಪ್ರೋಗ್ರಾಮಿಂಗ್ ಭಾಷೆಗಳನ್ನು ವಿದ್ಯಾರ್ಥಿಗಳು ಕಲಿತು ಬಳಸುತ್ತಿರುವುದು ಸಂತೋಷದ ವಿಷಯ. 

ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗವು ಭಾರತೀಯ ತಾಂತ್ರಿಕ ಶಿಕ್ಷಣ ಸೊಸೈಟಿ, ಇಂಜಿನಿಯರ್ ಸಂಸ್ಥೆ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಸಂಸ್ಥೆ, ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ ಸಹಯೋಗದೊಂದಿಗೆ ಕಾಲೇಜಿನಲ್ಲಿ  ಹ್ಯಾಕ್ ಟೆಕ್ ಪ್ಯೂಷನ್ ಕಾರ್ಯಕ್ರಮವು ಬಿಐಇಟಿಯಲ್ಲಿ ಮೊನ್ನೆ ನಡೆಯಿತು.

ಕಾರ್ಯಕ್ರಮಕ್ಕೆ ಬಿಐಇಟಿ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್‌ ಅವರು ಚಾಲನೆ  ನೀಡಿದರು. ಬಿಐಇಟಿ ಕಾಲೇಜಿನ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥರಾದ ಡಾ|| ಪೂರ್ಣಿಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹ್ಯಾಕ್ ಟೆಕ್ ಪ್ಯೂಷನ್‌ನ ತೀರ್ಪಗಾರರಾದ ನಿಟ್ಟೆ ಮೀನಾಕ್ಷಿ, ಪ್ರಾಧ್ಯಾಪಕರಾದ ಡಾ|| ಎಂ. ವಿ. ಮನೋಜ್‌ಕುಮಾರ್ ಮತ್ತು ಪ್ರೊ. ಬಿ. ಎಸ್. ಪ್ರವೀಣಕುಮಾರ್ ಭಾಗವಹಿಸಿದ್ದರು.

ಹ್ಯಾಕ್ ಟೆಕ್ ಪ್ಯೂಷನ್ ತಾಂತ್ರಿಕ ಸ್ಪರ್ಧೆಯಲ್ಲಿ ಶಿವಮೊಗ್ಗ, ದಾವಣಗೆರೆ ಕಾಲೇಜುಗಳಿಂದ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಇವುಗಳಲ್ಲಿ ಜಿ.ಎಂ.ಐ.ಟಿ ಕಾಲೇಜಿನ ತಂಡ ಪ್ರಥಮ ಸ್ಥಾನ, ಶಿವಮೊಗ್ಗದ ಪಿ.ಎಸ್.ಐ.ಟಿ ತಂಡ ಎರಡನೇ ಸ್ಥಾನ, ಬಿ.ಐ.ಇ.ಟಿ ಮೂರನೇ ಸ್ಥಾನ ಪಡೆದವು, ವಿಜೇತ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ಸಂಯೋಜನೆಕಾರರಾದ ಪ್ರೊ. ಬಿ.ಹೆಚ್.ಪುನೀತ್, ಡಾ|| ವಿನುತ ಹೆಚ್.ಪಿ, ಡಾ|| ಎನ್.ಎಸ್.ಪಾಟೀಲ್, ಡಾ|| ವರ್ಷಾ. ಎಮ್, ಪ್ರೊ.ರಂಜನ, ಪ್ರೊ.ಪುನೀತ್ ಎಸ್.ಪಿ, ಎಸ್. ಸಿದ್ದೇಶ್ ಕುರ್ಕಿ, ಮ್ಯಾಕ್ಸಿಮ್ ಟೆಲಿಸ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

error: Content is protected !!