ಮಳೆ ಅಭಾವ : ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು

ಮಳೆ ಅಭಾವ : ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು

ಹರಪನಹಳ್ಳಿ, ಜೂ.21- ರಾಜ್ಯದಲ್ಲಿ ಮಳೆ ಅಭಾವ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿವಿಧ  ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸುತ್ತಿದ್ದಾರೆ.

ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿಕೇರಿಯ ದೈವಸ್ಥರೆಲ್ಲ ಸೇರಿ ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿದ್ದಾರೆ. 

ಪಟ್ಟಣದಲ್ಲಿರುವ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ಮದುಮಕ್ಕಳಂತೆ ಸಿಂಗರಿಸಿ, ತಾಳಿ ಕಟ್ಟುವ ಶಾಸ್ತ್ರ ನಡೆಸಿದರು. ನಂತರ  ಭಾಜಾ ಭಜಂತ್ರಿ ಸೌಂಡಿನೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ  ಮೆರವಣಿಗೆ ಮಾಡಿದರು. 

ಈ ವೇಳೆ ದೈವಸ್ಥರಾದ  ರಾಯದುರ್ಗದ ದುರುಗಪ್ಪ ಮಾತನಾಡಿ, ಕಳೆದ 30 ದಿನಗಳಿಂದ ಮಳೆಯಾಗದೆ ರೈತರಿಗೆ ತುಂಬಾ ತೊಂದರೆಯಾಗಿದೆ. ಈಗಾಗಲೇ ನಾವು ಹೊಲವನ್ನು ಸ್ವಚ್ಛಗೊಳಿಸಿ ಬಿತ್ತಲು ತಯಾರು ಮಾಡಿದ್ದೇವೆ. ಆದರೆ ಮಳೆ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲೇ ಚೆನ್ನಾಗಿ ಮಳೆಯಾಗಿತ್ತು. ಈ ಬಾರಿ ಮಳೆಯಾಗಿಲ್ಲ. ಆದ್ದರಿಂದ ದೈವಸ್ಥರೆಲ್ಲ ಸೇರಿ ಕತ್ತೆಗಳ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ಭಾವನೆಯಿಂದ ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿಸಿ, ಊರ ತುಂಬಾ ಮೆರವಣಿಗೆ ಮಾಡಿಸಿ, ಊರಿನ ಪ್ರಮುಖ ದೇವ ಸ್ಥಾನಗಳಿಗೆ ಪೂಜೆ ಮಾಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ದೈವಸ್ಥರಾದ ನಿಟ್ಟೂರು ದೊಡ್ಡಹಾಲಪ್ಪ, ಕೆ. ಅಂಜಿನಪ್ಪ, ಎಂ. ಉಚ್ಚಂಗೆಪ್ಪ, ಆಳರಪ್ಪರ ಹಾಲಪ್ಪ, ಅರಸಿಕೆರೆ ನಾಗೇಂದ್ರ, ವರಕೇರಿ ಉಚ್ಚಂಗೆಪ್ಪ, ರಾಯದುರ್ಗದ ಕರಿಬಸಪ್ಪ, ತಲವಾಗಲು ಹಾಲೇಶ, ಮೆಂಗಳಪ್ಪರ ಸುರೇಶ, ರಾವನಿ ಬಸವರಾಜ, ರಾಯದುರ್ಗದ ಕರಿಯ, ಹನುಮಂತಪ್ಪ, ಗಿಡ್ಡಳ್ಳಿ ಹನುಮಂತ, ಮ್ಯಾಕಿ ಬಿದ್ದಪ್ಪ, ಗಿಡ್ಡ ಮಂಜ, ಗಿಡ್ಡಳ್ಳಿ ಪರಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!