ಜೈನ್ ಕಾಲೇಜಿನಲ್ಲಿ ಯೋಗ ದಿನಾಚರಣೆ

ಜೈನ್ ಕಾಲೇಜಿನಲ್ಲಿ ಯೋಗ ದಿನಾಚರಣೆ

ದಾವಣಗೆರೆ, ಜೂ. 21- ನಗರದ ಜೈನ್ ತಾಂತ್ರಿಕ ಮಹಾವಿದ್ಯಾ ಲಯದ ಎನ್‌ಎಸ್‌ ಎಸ್ ಘಟಕದ ಸಹ ಯೋಗದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಆನೆಕೊಂಡ ಬಸಪ್ಪ ಶಾಲೆಯ ಯೋಗ ಶಿಕ್ಷಕ ಕೆ.ಸಿ. ಬಸವರಾಜ್ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ಯೋಗದಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ನಮ್ಮ ಜೀವನ ದಲ್ಲಿ ಉತ್ತಮ ಗುರಿಗಳನ್ನು ಸದೃಢ ಮನಶಕ್ತಿಯಿಂದ ಸಾಧಿಸಬಹುದು. ಅದಕ್ಕೆ ನಿತ್ಯ ಯೋಗ ಪೂರಕವಾಗಿದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಿ.ಬಿ. ಗಣೇಶ್ ಮಾತನಾಡಿ, ನಿತ್ಯ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಾ ಉತ್ತಮ ಸಮಾಜವನ್ನು ಕಟ್ಟಬೇಕು ಎಂದು ತಿಳಿಹೇಳಿದರು. 

ಕಾರ್ಯಕ್ರಮದ ಸಂಯೋಜಕ ವೀರೇಶ್ ಕುಮಾರ್ ಕೆ.ಎಸ್., ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಹೆಚ್.ಎಂ. ರಾಜೇಶ್ವರಿ,  ಯಾಂತ್ರಿಕ ವಿಭಾಗದ ಬಿ.ಹೆಚ್. ಶಿವಯೋಗಿ, ಸಿವಿಲ್ ವಿಭಾಗದ ಸಿ.ಎಲ್. ರಮೇಶ್, ಬೇಸಿಕ್ ಸೈನ್ಸ್ ವಿಭಾಗದ ಎಸ್. ರಘು ಮತ್ತು ಇತರರು ಉಪಸ್ಥಿತರಿದ್ದರು. 

error: Content is protected !!