ಬಲ್ಲೂರು ಗ್ರಾಮದಲ್ಲಿ ಬಸಿಯುತ್ತಿರುವ ನೀರು

ಬಲ್ಲೂರು ಗ್ರಾಮದಲ್ಲಿ ಬಸಿಯುತ್ತಿರುವ ನೀರು

ದಾವಣಗೆರೆ, ಜೂ.21- ತಾಲ್ಲೂಕಿನ ಬಲ್ಲೂರು  ಗ್ರಾಮದಲ್ಲಿ ಬಸಿಯುತ್ತಿರುವ     ನೀರಿನ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

12-09-2008 ರಲ್ಲಿಯೇ   ಜಿಲ್ಲಾಧಿಕಾರಿ ಗಳು ಉಪವಿಭಾಗಾಧಿಕಾರಿ,  ಕಾರ್ಯಪಾಲಕ ಅಭಿಯಂತರರು ಹಾಗೂ ತಹಶೀಲ್ದಾರವರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.  ಆಗ   ಸದರಿ ಗ್ರಾಮದ ಮೇಲ್ಭಾಗದಲ್ಲಿ ನೀರಾವರಿ ಇದ್ದು, ನೀರಾವರಿ ಜಮೀನಿನಿಂದ 8 ರಿಂದ 10 ಅಡಿ ಕೆಳಭಾಗದಲ್ಲಿ ಗ್ರಾಮವಿದ್ದು, ಗ್ರಾಮಕ್ಕೆ ನೀರು ಬಸಿಯುತ್ತಿದೆ.  ಜಂಗಲ್ ಮತ್ತು ಹೂಳು ತುಂಬಿರುವುದರಿಂದ ಮನೆಯ ಗೋಡೆಗಳು ಮತ್ತು ನೆಲ ತೇವಾಂಶದಿಂದ ಕೂಡಿದ್ದು, ವಾಸಕ್ಕೆ ತೊಂದರೆಯಾಗಿರುತ್ತದೆ ಎಂದು ವರದಿಯನ್ನು ನೀಡಿರುತ್ತಾರೆ. 

2008ರಿಂದ ಈವರೆಗೂ ಸಹ ನೀರಾವರಿ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಉಚ್ಛನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.

  ಸಂದರ್ಭದಲ್ಲಿ  ಸಂಘದ ಜಿಲ್ಲಾಧ್ಯಕ್ಷ  ಕೆ.ಎಸ್.ಪ್ರಸಾದ್, ಉಪಾಧ್ಯಕ್ಷ  ರಾಂಪುರದ ಬಸವರಾಜ, ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್         ಮುಖಂಡರಾದ    ಪರಶುರಾಮರೆಡ್ಡಿ, ಮಾಯಕೊಂಡದ ಅಶೋಕ, ಚಿನ್ನಸಮುದ್ರ ಭೀಮಾನಾಯ್ಕ,  ಐಗೂರು ಶಿವಮೂರ್ತಪ್ಪ, ನಾಗರಕಟ್ಟೆ ಜಯನಾಯ್ಕ, ಮಾಯ ಕೊಂಡದ ಪ್ರತಾಪ್ ಮತ್ತಿತರರು ಇದ್ದರು.

error: Content is protected !!