ನಾಡು ಕಂಡ ಮಹಾನ್ ತಪಸ್ವಿ ಅಥಣಿ ಮುರುಘೇಂದ್ರ ಶಿವಯೋಗಿಗಳು

ನಾಡು ಕಂಡ ಮಹಾನ್ ತಪಸ್ವಿ ಅಥಣಿ ಮುರುಘೇಂದ್ರ ಶಿವಯೋಗಿಗಳು

ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಜೂ. 20- ಅಥಣಿ ಮುರುಘೇಂದ್ರ ಶಿವಯೋಗಿಗಳು ನಾಡು ಕಂಡ ಮಹಾನ್ ತಪಸ್ವಿಗಳು ಎಂದು  ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಸೋಮವಾರ ಸಂಜೆ ನಗರದ ಶಿವಯೋ ಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ 188ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಸವ ತತ್ವ ಮುರುಘೇಂದ್ರ ಶಿವಯೋಗಿಗಳವರ ಜೀವವನದ ಉಸಿರಾಗಿತ್ತು. ಬಸವತತ್ವ ಆಚರಣೆಯಿಂದ ವ್ಯಕ್ತಿ ಮತ್ತು ಸಮಾಜದ ಉದ್ಧಾರ ಆಗುತ್ತದೆ ಎಂಬುದು ಅವರ ನಿಲುವಾಗಿತ್ತು ಎಂದರು. ಶಿವಯೋಗಿಗಳು  ಜೀವನದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದರು. ಮೃತ ಬಾಲಕನಿಗೆ ಜೀವದಾನ ನೀಡಿದ್ದರು. ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪ ಅವರಿಗೆ ಲಿಂಗ ದೀಕ್ಷೆ ನೀಡುವ ಮೂಲಕ  ಬಹುದೊಡ್ಡ ಕ್ರಾಂತಿ ಮಾಡಿದರು ಎಂದು ಸ್ಮರಿಸಿದರು.

ಹಣವನ್ನು ಚೇಳು ಎಂದು ಭಾವಿಸಿದ್ದ ಅವರು, ಜೀವನದಲ್ಲಿ ಎಂದೂ ಹಣಕ್ಕೆ ಆಸೆ ಪಡಲಿಲ್ಲ. ಭಕ್ತರು ಕೊಡುತ್ತಿದ್ದ ಕಾಣಿಕೆಯನ್ನೂ ಪಡೆಯುತ್ತಿರಲಿಲ್ಲ. ಹಣದ ವ್ಯಾಮೋಹ ಬಂದರೆ ಮನುಷ್ಯ ರಾಕ್ಷಸನಾಗುತ್ತಾನೆ ಎಂದಿದ್ದ ಅವರು ಪರಮವೈರಾಗ್ಯ ಮೂರ್ತಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಗುರುಗಳು ಹಾಗೂ ದೇವರ ಸ್ಮರಣೆ ಮರೆಯಾಗುತ್ತಿದೆ. ಮಹಾತ್ಮರನ್ನು ಸ್ಮರಿಸಿದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ಎಂ.ಜಯಕುಮಾರ್, ಎಸ್.ಓಂಕಾರಪ್ಪ, ಕಣಕುಪ್ಪಿ ಮುರುಗೇಶಪ್ಪ, ಅಂದನೂರು ಮುಪ್ಪಣ್ಣ, ನಸೀರ್ ಅಹ್ಮದ್ ಉಪಸ್ಥಿತರಿದ್ದರು.

error: Content is protected !!