ವೀರಶೈವ ಸಭಾದಿಂದ ಪ್ರತಿಭಾ ಪುರಸ್ಕಾರ

ವೀರಶೈವ ಸಭಾದಿಂದ ಪ್ರತಿಭಾ ಪುರಸ್ಕಾರ

ಹರಪನಹಳ್ಳಿ, ಜೂ.20- ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಂಘದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಜಶೇಖರ್ ತಿಳಿಸಿದರು.

ಪಟ್ಟಣದ ಆರ್‍ಎಸ್‍ಎನ್ ಶಾಲೆಯಲ್ಲಿ  ಮೊನ್ನೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆಯ ಬಳಿಕ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, 2022-23ನೇ ಸಾಲಿ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ವಿವರವಾದ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಭರ್ತಿ ಮಾಡುವ ಮೂಲಕ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಹಾಕಬೇಕು ಎಂದರು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ಗಂಗಾಧರ ಗುರುಮಠ್‌ ಅವರ ಬದಲಾಗಿ ಸಿ.ಎಂ.ಕೊಟ್ರಯ್ಯ ಅವರನ್ನು ನಿರ್ದೇಶಕ ಸ್ಥಾನಕ್ಕೆ ಸರ್ವಸದಸ್ಯರು ಆಯ್ಕೆ ಮಾಡಲಾಯಿತು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿ ತಿಗಾಗಿ ಸಂಘದ ಕಾರ್ಯದರ್ಶಿ ಟಿ.ಎಚ್.ಎಂ.ಮಲ್ಲಿಕಾ ರ್ಜುನ (9448444867), ನಿರ್ದೇಶಕ ಪಿ.ಕರಿಬಸಪ್ಪ (9480311328) ಅವರುಗಳನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ನಿರ್ದೇಶಕ ರಾದ ಅಂಬ್ಲಿ ಮಂಜುನಾಥ, ಗೊಂಗಡಿ ನಾಗರಾಜ, ಗುರುಸಿದ್ದಯ್ಯ, ಪದ್ಮಾವತಿ, ಪುಷ್ಪ ದಿವಾಕರ, ಪ್ರಭಾ ಅಜ್ಜಣ್ಣ, ಕಾನಹಳ್ಳಿ ರುದ್ರಪ್ಪ, ಪಿ.ಬಸವರಾಜ, ಕನ್ನಿಹಳ್ಳಿ ಪ್ರಭಾಕರ, ಅಕ್ಕಮಹಾದೇವಿ ನಂಜನಗೌಡ್ರು, ವೀಣಾ ಬೆನ್ನೂರು, ಸೇರಿದಂತೆ ಇತರರು ಇದ್ದರು.

error: Content is protected !!