ಹರಿಹರ : ಹಳ್ಳದಕೇರಿ ಶಾಲೆ ಪರಿಶೀಲಿಸಿದ ಶಾಸಕ ಹರೀಶ್

ಹರಿಹರ : ಹಳ್ಳದಕೇರಿ ಶಾಲೆ ಪರಿಶೀಲಿಸಿದ ಶಾಸಕ ಹರೀಶ್

ಹರಿಹರ, ಜು. 20 – ನಗರದ ಡಿ.ಆರ್.ಎಂ. ಮೈದಾನದ ಆವರಣದಲ್ಲಿರುವ ಹಳ್ಳದಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಶಾಸಕ ಬಿ.ಪಿ. ಹರೀಶ್ ಪರಿಶೀಲನೆ ನಡೆಸಿದರು.

ಪೋಷಕರ ದೂರಿನ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಹರೀಶ್ ಅಲ್ಲಿನ ಪರಿಸ್ಥಿತಿಯ ವಿವರ ಪಡೆದರು. ನಂತರ ಮಾತನಾಡಿದ ಅವರು ಶಾಲೆಯ ವಿಸ್ತೀರ್ಣ ಮತ್ತಿತರೆ ದಾಖಲೆಗಳ ಬಗ್ಗೆ ಬಿಇಒ ಹಾಗೂ ಶಾಲೆಯ ಆಡಳಿತ ಮಂಡಳಿ ಬಳಿ ಮಾಹಿತಿಯೇ ಇಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸುವುದಾಗಿ ಹೇಳಿದರು. ತಾತ್ಕಾಲಿಕವಾಗಿ ಪಂಚಾಯತ್ ರಾಜ್ ಇಲ್ಲವೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ ಸುಸಜ್ಜಿತ ಶೌಚಾಲಯ ನಿರ್ಮಿಸುವುದಾಗಿ ಹೇಳಿದರು.

ಬಿಇಓ ಹನುಮಂತಪ್ಪ ಮಾತನಾಡಿ, ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆದಷ್ಟು ಬೇಗ ಶಾಲೆಗೆ ಹೊಸ ರೂಪ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು. ಪೋಷಕರರಾದ ಶ್ವೇತಾ ಹಣಿಗಿ, ಅಶ್ವಿನಿ, ರೂಪಾ ಮಾತನಾಡಿ, ಶಾಲೆಯ ಹಂಚು ಸೋರುತ್ತಿದೆ. ಹೆಣ್ಣು ಮಕ್ಕಳಿಗೆ ಸುಸಜ್ಜಿತ ಶೌಚಾಲಯ ಇಲ್ಲ. ಸಂಜೆ ನಂತರ ಕುಡುಕರ ಹಾವಳಿ ಹೆಚ್ಚಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಜಯಪ್ಪ, ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರದೀಪ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿರಂಜನ್, ರೂಪಾ ಕಾಟ್ವೆ, ಜ್ಯೋತಿ ಕಾಟ್ವೆ, ಅನಿತಾ, ಸುಜಾತ, ಭೂಮಿಕಾ, ಶಿಲ್ಪಾ, ಪ್ರವೀನ್ ಮಾಜಿ ನಗರಸಭೆ ಸದಸ್ಯ ರಾಜು ರೋಖಡೆ, ಶಿವಶಂಕರ್, ವಿನಾಯಕ, ಸುನಿಲ್ ಇತರರು ಹಾಜರಿದ್ದರು.

error: Content is protected !!