ಅಂತರರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ಆರಂಭ

ಅಂತರರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ಆರಂಭ

ದಾವಣಗೆರೆ, ಜೂ. 18 – ಅಮೇರಿಕಾದ ಹೆಸರಾಂತ ವಿಜ್ಞಾನಿ ಡಾ. ಹಾರ್ವರ್ಡ್ ಗಾರ್ಡ್ನರ್ ಅವರ ಮಲ್ಟಿಪಲ್ ಇಂಟಲಿಜೆನ್ಸ್- ಮಕ್ಕಳಲ್ಲಿರುವ 8 ಬುದ್ಧಿವಂತಿಕೆಗಳನ್ನು ಉತ್ತಮಗೊಳಿಸುವ ಹಾಗೂ ಮಕ್ಕಳ ಕಲಿಕೆಯನ್ನು ಪರಿಣಾಮಕಾರಿಗೊಳಿಸುವ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ನ ಶಾಖೆ ನಗರದಲ್ಲಿ ಆರಂಭವಾಗಿದೆ. 

ಮಲ್ಟಿಪಲ್ ಇಂಟಲಿಜೆನ್ಸ್ ಆಧಾರಿತ ಪ್ರಿ ಸ್ಕೂಲ್ ಇದಾಗಿದ್ದು, ವಿಭಿನ್ನವಾದ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ಹಾಗೂ  ಅವರ ಮುಂದಿನ ಜೀವನಕ್ಕೆ ಭದ್ರ ತಳಹದಿ ಹಾಕಲಿದೆ. ಮಕ್ಕಳಲ್ಲಿ ಮೊದಲ ಆರು ವರ್ಷದವರೆಗೂ ಮೆದುಳಿನ ಬೆಳವಣಿಗೆ ವೇಗವಾದ ಗತಿಯಲ್ಲಿ ಇರುತ್ತದೆ.ಮೆದುಳಿನ ಶೇ. 80 ರಷ್ಟು ಬೆಳವಣಿಗೆ ಮೊದಲ ಆರು ವರ್ಷಗಳು ಆಗುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಆದ್ದರಿಂದ ಮಕ್ಕಳ ಮೊದಲ ಆರು ವರ್ಷಗಳು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಬಹಳ ಮುಖ್ಯ.  ಮಕ್ಕಳಲ್ಲಿ ಇರುವಂತಹ 8 ರೀತಿಯ ಬುದ್ಧಿವಂತಿಕೆಗಳನ್ನು ಉತ್ತಮಗೊಳಿಸಲು 200 ಕ್ಕೂ ಹೆಚ್ಚು ವಿಶೇಷವಾದ ಚಟುವಟಿಕೆಗಳನ್ನು ಶಿಕ್ಷಣ ತಜ್ಞರ ತಂಡ ಸಿದ್ಧಗೊಳಿಸಿ ಈಗಾಗಲೇ ಹಲವಾರು ಶಾಲೆಗಳಲ್ಲಿ ಅಳವಡಿಸಲಾಗಿದೆ.

ಗಣಿತ, ಪರಿಸರ ವಿಜ್ಞಾನ, ಇಂಗ್ಲಿಷ್ ಹಾಗು ಭಾಷೆಗಳ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಈ ಶಾಲೆಯಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದು ಶಾಲೆಯ ಸಂಸ್ಥಾಪಕರಾದ ಶ್ರೀಮತಿ ದೀಪಾ ರಾವ್  ತಿಳಿಸಿದ್ದಾರೆ. 

ಪುಟಾಣಿಗಳಾದ  ಯದುವೀರ್, ಮನ್ವಿತಾ ಬಿ.ಎಮ್ ಹಾಗೂ ಅನೂಪ್ ಪಾಟೀಲ್ ಗಿಡ ನೆಡುವುದರ ಮೂಲಕ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿದ್ದು ವಿಶೇಷವಾಗಿತ್ತು. 

ಭಾರತೀಯ ಸಂಸ್ಕೃತಿ ಮತ್ತು ನಮ್ಮ ಜನಪದ ಬೇರುಗಳನ್ನು ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮುಖಾಂತರ ತಿಳಿಸಲಾಗುತ್ತದೆ. 

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಬೇರೆಯವರೊಂದಿಗೆ ಸುಲಭವಾಗಿ
ಬೆರೆಯಲು ಪ್ರೇರೇಪಿಸುವ ಹಲವಾರು ಚಟುವಟಿಕೆಗಳೊಂದಿಗೆ ಪುಟಾಣಿಗಳು ತಮ್ಮ ಶಿಕ್ಷಣದ ಮೊದಲ ಹೆಜ್ಜೆಯನ್ನು ಎಂ.ಐ ವಿಂಗ್ಸ್‌ನಲ್ಲಿ ಇಡಲಿದ್ದಾರೆ.

ಶಿಕ್ಷಕಿಯರಾದ ರೇಖಾಶ್ರೀ, ಅಂಬ್ರೀನ್ ಹಾಗೂ ಆಡಳಿತ ಮಂಡಳಿಯ ಶ್ರೀಮತಿ ದೀಪಾ ರಾವ್ ಮತ್ತು ಬಿ.ಟಿ. ವೆಂಕಟೇಶ್ ಹಾಗೂ ಇತರರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

error: Content is protected !!