ಧರ್ಮಸ್ಥಳ ಸಂಘದ ಸಾಮಾಜಿಕ ಸೇವೆ ಶ್ಲ್ಯಾಘನೀಯ

ಧರ್ಮಸ್ಥಳ ಸಂಘದ ಸಾಮಾಜಿಕ ಸೇವೆ ಶ್ಲ್ಯಾಘನೀಯ

ಜಗಳೂರು,ಜೂ. 18- ಧರ್ಮಸ್ಥಳ ಸಂಘದ ಸಾಮಾಜಿಕ ಸೇವೆಗಳು ಶ್ಲ್ಯಾಘ ನೀಯ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪ್ರೇರಣ ಸಮಾಜ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ 139 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಶೈಕ್ಷಣಿಕ ಜೀವನವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಸಂಘ-ಸಂಸ್ಥೆಗಳನ್ನು ಪೋಷಕರು ಸ್ಮರಿಸಬೇಕಿದೆ. ಧರ್ಮಸ್ಥಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಮದ್ಯವರ್ಜನೆ ಶಿಬಿರ, ಸಾಲ-ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತುಮಕೂರು ಸಿದ್ಧಗಂಗಾ ಮಠದಲ್ಲಿ ಜಾತಿ, ಲಿಂಗ ತಾರತಮ್ಯವಿಲ್ಲದ ಶಿಕ್ಷಣದ ಕೊಡುಗೆ ರಾಜ್ಯಕ್ಕೆ ಮಾದರಿಯಾಗಿದೆ. ದಾಸೋಹ ಮಠದಲ್ಲಿ ವ್ಯಾಸಂಗ ಮಾಡಿದ ಹಲವಾರು ಬಡ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಪ್ರಶಂಸಿಸಿದರು.

ಆರಂಭದಿಂದಲೂ ನಾನೊಬ್ಬ ಸಮಾಜ ಸೇವಕನಾಗಿರುವೆ. ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವೆ. ನನಗೆ ಯಾವುದೇ ಸಂದರ್ಭದಲ್ಲಿ  ಕರೆ ಮಾಡಿ. ಸಮಾಜ ಸೇವೆಗೆ ಶಾಸಕನಾ ಗಬೇಕಿಲ್ಲ. ನಾನು ಶಾಸಕನಾಗಿರುವುದು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಎಂದು ದೇವೇಂದ್ರಪ್ಪ ತಿಳಿಸಿದರು.

ಜಿಲ್ಲಾ ನಿರ್ದೇಶಕ ಜನಾರ್ದನ್ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ 4 ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣಕ್ಕಾಗಿ ಬಡಜನರ ಪರವಾಗಿ ಕಾರ್ಯನಿರ್ವಹಿಸುತ್ತಿದೆ‌. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ 82 ಕೋಟಿ ರೂ. ಶಿಷ್ಯವೇತನ ಕಲ್ಪಿಸಿದೆ. ಇದರಿಂದ ವಿದ್ಯಾರ್ಥಿಗಳ ಇಂಜಿನಿಯರ್ ಶಿಕ್ಷಣದ ಕನಸು ನನಸಾಗುವುದು. ಅಲ್ಲದೆ ಶಿಕ್ಷಕರ ಕೊರತೆಯಿದ್ದಲ್ಲಿ  ನಮ್ಮ ಸಂಸ್ಥೆ ನಿಯೋಜಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಪ್ರೇರಣಾ ಸಮಾಜ ಸಂಸ್ಥೆ ನಿರ್ದೇಶಕ  ಸಿಲ್ಟೆಸ್ಟರ್ ಪಿರೇರಾ,   ಜಿಲ್ಲಾ ಜನ ಜಾಗೃತಿ  ಉಪಾಧ್ಯಕ್ಷ ಡಾ. ಪಿ.ಎಸ್. ಅರವಿಂದನ್, ಸಿಎ ಮಲ್ಲಿಕಾರ್ಜುನ್,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎನ್. ಸುರೇಶ್ ರೆಡ್ಡಿ,  ಉಪಪ್ರಾಂಶುಪಾಲ ಡಿ.ಡಿ. ಹಾಲಪ್ಪ, ಬಿ. ತಿಪ್ಪೇಸ್ವಾಮಿ ಸೇರಿದಂತೆ ಧರ್ಮಸ್ಥಳ ಸಂಸ್ಥೆಯ ಯೋಜನೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!