ಪುಸ್ತಕ ನಮ್ಮಿಂದ ಎಂದಿಗೂ ದೂರ ಹೋಗದ ಉತ್ತಮ ಸ್ನೇಹಿತ

ಪುಸ್ತಕ ನಮ್ಮಿಂದ ಎಂದಿಗೂ ದೂರ ಹೋಗದ ಉತ್ತಮ ಸ್ನೇಹಿತ

ಧರಾಮ ಕಾಲೇಜ್‌ನಲ್ಲಿ ಕೇಂದ್ರ ಗ್ರಂಥಾಲಯದ ಸಹಾಯಕ ಗೋಪಾಲ್

ದಾವಣಗೆರೆ, ಜೂ.18- ಪುಸ್ತಕಗಳನ್ನು ಓದುವ ಅಭ್ಯಾಸ ನಮಗೆ ಜ್ಞಾನವನ್ನು ನೀಡುತ್ತದೆ.  ನಮ್ಮ ಶಬ್ದಕೋಶವನ್ನು ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಕಠಿಣ ಪರಿಸ್ಥಿತಿಗಳಲ್ಲಿದ್ದಾಗ ಪುಸ್ತಕಗಳು ನಮ್ಮ ಅತ್ಯುತ್ತಮ ಮಾರ್ಗದರ್ಶಿಯಾಗಿ ನಮಗೆ ಸಹಾಯ ಮಾಡುತ್ತವೆ ಎಂದು ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗೋಪಾಲ್ ಹೇಳಿದರು.

ನಗರದ ಧ.ರಾ.ಮ. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ `ನಮ್ಮ ಜೀವನದಲ್ಲಿ ಪುಸ್ತಕಗಳ ಪ್ರಾಮುಖ್ಯತೆ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಪ್ರತಿ ವಯೋಮಾನದ ಜನರಲ್ಲಿನ ಒತ್ತಡದ ಮಟ್ಟವನ್ನು ನಿವಾರಿಸಲು ಪುಸ್ತಕಗಳನ್ನು ಓದುವುದು ಉತ್ತಮ ಮಾರ್ಗವಾಗಿದೆ. ಪುಸ್ತಕಗಳು ಶತಮಾನಗಳಿಂದಲೂ ಇವೆ.   ಪುಸ್ತಕ  ನಮ್ಮಿಂದ ಎಂದಿಗೂ ದೂರ ಹೋಗದ ಉತ್ತಮ ಸ್ನೇಹಿತನಂತೆ,  ಹಾಗಾಗಿ  ನಮ್ಮ ಜೀವನದಲ್ಲಿ ಪುಸ್ತಕಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು.

ಪ್ರಾಂಶುಪಾಲರಾದ ಡಾ. ವನಜಾ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಪ್ಪ ಹಾಗೂ ಹರೀಶ್ ಕುಮಾರ್,  ರೂಪಶ್ರೀ, ರೋಹಿತ್, ರುದ್ರೇಶ್, ನಾಗರಾಜ್, ಹರೀಶ್, ರಮ್ಯಾ ಕುಮಾರಿ, ಮಂಜುನಾಥ್ ಚೆನ್ನಿ ಮತ್ತು ಎ. ಆರ್. ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಮುಖ್ಯ ಗ್ರಂಥಪಾಲಕ  ಡಾ. ಚಮನ್ ಸಾಬ್ ಉಪಸ್ಥಿತರಿದ್ದರು.  

error: Content is protected !!