ಬೆಳ್ಳೂಡಿ : ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ನೆರವು

ಬೆಳ್ಳೂಡಿ : ದೇವಸ್ಥಾನದ  ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ನೆರವು

ಮಲೇಬೆನ್ನೂರು, ಜೂ.12- ಬೆಳ್ಳೂಡಿ ಗ್ರಾಮದ ಶ್ರೀ ಚಂದ್ರಗುತ್ತ್ಯೆಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಾ. ವಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದ 2 ಲಕ್ಷ ರೂ.ಗಳ ಡಿಡಿಯನ್ನು ಯೋನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು ಸೋಮವಾರ ದೇವಸ್ಥಾನದ ಸಮಿತಿಯವರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ವಿಜಯಕುಮಾರ್ ನಾಗನಾಳ್ ಅವರು, ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಜನರ ಬದುಕನ್ನು ಹಸನಗೊಳಿಸುವ ನಿಟ್ಟಿನಲ್ಲಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ಹಂತಗಳಲ್ಲೂ ಕೆಲಸ ಮಾಡುತ್ತಿದೆ. ದೇವಸ್ಥಾನಗಳ ಜೀರ್ಣೋ ದ್ಧಾರಕ್ಕೆ ನೆರವು ನೀಡುವ ಮೂಲಕ ಜನರಲ್ಲಿ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಅರಿವು ಮೂಡಿಸುವ ಕೆಲಸ ಮಾಡಲಾ ಗುತ್ತಿದೆ. ದೇವಸ್ಥಾನಗಳನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇಟ್ಟುಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಉಮೇಶ್, ವಕೀಲರಾದ ಕೆ.ಚನ್ನಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹರಿಹರ ಯೋಜನಾಧಿಕಾರಿ ಗಣಪತಿ ಮಾಳಂಜಿ, ಗ್ರಾ.ಪಂ. ಪಿಡಿಓ ಶಿವಪ್ಪ ಬಿರಾದಾರ್, ಮಾಗನೂರು ಹನುಮಂತಪ್ಪ, ಆಶಾ ಶಂಭುಲಿಂಗಪ್ಪ, ಸುನೀತಾ ಪರಶುರಾಮ್, ವೀರೇಶ್, ಸುದೀಪ್‌ಗೌಡ್ರು, ಸಿದ್ದೇಶಪ್ಪ, ದೇವಸ್ಥಾನದ ಸಮಿತಿಯ ಕೆ.ಪರಮೇಶಪ್ಪ, ಬಿ.ಸಿದ್ದೇಶ್, ಎಂ.ಎನ್.ಬಸವರಾಜ್, ಚಂದ್ರಪ್ಪ, ಹನುಮಂತಪ್ಪ, ವಿಜಯಕುಮಾರ್, ಬೆಳ್ಳೂಡಿ ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಬೆಳ್ಳೂಡಿ ವಲಯದ ಮೇಲ್ವಿಚಾರಕಿ ಗಂಗಮ್ಮ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಈ ವೇಳೆ ಹಾಜರಿದ್ದರು.

error: Content is protected !!