ಹರಿಹರ, ಜು. 12- ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಹಿನ್ನೆಲೆಯಲ್ಲಿ, ನಗರಗಳಿಗೆ ಬಂದ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದುದು ಕಂಡು ಬಂತು. ರಾಜ್ಯದ ಹೃದಯ ಭಾಗದಲ್ಲಿರುವ ಹರಿಹರ ನಿಲ್ದಾಣಕ್ಕೆ ದಿನಕ್ಕೆ ಕನಿಷ್ಠ 1300 ಬಸ್‌ಗಳು ಬರುತ್ತವೆ. ಉಚಿತ ಬಸ್ ಪ್ರಯಾಣವಿದ್ದರೂ ಸಹ, ಬಸ್‌ಗಳಲ್ಲಿ ನೂಕುನುಗ್ಗಲು ಇರಲಿಲ್ಲ. ಆದರೆ, ಸಂಜೆ ವೇಳೆ ಹಲವು ಗ್ರಾಮಗಳ ಬಸ್‌ಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು.
ಸೋಮವಾರದಂದು ನಗರದ ಪ್ರಸಿದ್ಧ ಐತಿಹಾಸಿಕ ದೇವಸ್ಥಾನವಾದ ಶ್ರೀ ಹರಿಹರೇಶ್ವರ ಮತ್ತು ಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಆಗಮಿಸಿದ್ದರು.
ಬಸ್ ಪ್ರಯಾಣ ಉಚಿತವಿದ್ದ ಕಾರಣ ಮೆಟೆಡೋರ್, ಆಪೆ ಆಟೋ ಮತ್ತಿತರೆ ವಾಹನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿತ್ತು.