ದಾವಣಗೆರೆ, ಜೂ.12- ಬೆಂಗಳೂರಿನ ಸ್ಕೇಟಿಂಗ್ ಅಕಾಡೆಮಿ ಮಲ್ಲಸಂದ್ರದಲ್ಲಿ ಪ್ರಥಮ ಕರ್ನಾಟಕ ರೋಲ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳನ್ನು ನಡೆಸಲಾಯಿತು. ಈ ಪಂದ್ಯಾವಳಿಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಎಂಟು ತಂಡಗಳು ಭಾಗವಹಿಸಿದ್ದವು.
ನಗರದ ಸ್ಟಾರ್ ಸ್ಪೋರ್ಟ್ಸ್ ತಂಡದ ಸಂಸ್ಥಾಪಕರಾದ ಶೈಲಾ ನೀಲ್‍ಕಾಂತ್ ಅವರು, ತಂಡವು ಪ್ರಥಮ ಸ್ಥಾನ ಪಡೆಯಲು ಸಂಪೂರ್ಣ ಪ್ರೋತ್ಸಾಹವನ್ನು, ಸಹಕಾರ ನೀಡಿದ್ದರು.
ದಾವಣಗೆರೆ ನಗರದ ತಂಡಕ್ಕೆ ಪೃಥ್ವಿಕಾಂತ್ ಕೊಟ್ಟಿಗಿ ಅವರು ತರಬೇತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ್ದು, ಪ್ರಪ್ರಥಮವಾಗಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಂಗಾರದ ಮೆಡಲ್ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಕರ್ನಾಟಕ ರಾಜ್ಯದ ರೋಲ್‍ಬಾಲ್ ಕಾರ್ಯದರ್ಶಿ ಗೋವಿಂದಯ್ಯ, ಅಧ್ಯಕ್ಷರಾದ ಜ್ಯೋತಿ ಚಂದಕ್, ಅಂತರರಾಷ್ಟ್ರೀಯ ಆಟಗಾರ ನಿಖಿಲ್ ಚಂದಕ್, ದಕ್ಷಿಣ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಮತ್ತು ದೇಶದ ರೋಲ್‍ಬಾಲ್ ಕಾರ್ಯದರ್ಶಿ ಚೇತನ್, ಈ ಆಟದ ಆವಿಷ್ಕಾರಿಗಳಾದ ರಾಜು ದೊಬಾಡೆ, ಜಿಲ್ಲಾ ಅಧ್ಯಕ್ಷರಾದ ಸುಮಾ, ವಿಜಯಕುಮಾರ್, ತರಬೇತುದಾರ ಪೃಥ್ವಿಕಾಂತ್, ನೀಲ್‍ಕಾಂತ್, ಆಕಾಶ್ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.