ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಿಶ್ವ ಪರಿಸರ ದಿನಾಚರಣೆ

ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ ಜೂ.12- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

 ಬಾಪೂಜಿ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸುರೇಶ್  ಮುಖ್ಯ ಅತಿಥಿಗಳಾಗಿ ಆಗಮಿಸಿ, ನಮ್ಮ ಸುತ್ತಮುತ್ತಲಿನ ಪರಿಸರವು ಪ್ರತಿದಿನವೂ ನಮ್ಮೆಲ್ಲರಿಗೂ ತುಂಬಾ ಅವಶ್ಯಕವಾಗಿದ್ದು, ವಿದ್ಯಾವಂತರಾದ ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಬಟ್ಟೆಯಿಂದ ತಯಾರಾಗುವ ವಸ್ತುಗಳನ್ನು ಬಳಕೆ ಮಾಡಿ ಪರಿಸರವನ್ನು ಕಾಪಾಡಬೇಕೆಂದು ತಿಳಿಸಿದರು.

ಪ್ರಾಂಶುಪಾಲರಾದ ಶ್ರೀಮತಿ ಜೆ.ಎಸ್. ವನಿತಾ  ಮಾತನಾಡಿ, ನಾವು   ಜೀವಿಸಲು ಗಾಳಿಯು ಅತ್ಯಂತ ಶ್ರೇಷ್ಠವಾಗಿದ್ದು, ಈ ಪರಿಸರದಲ್ಲಿ ಸಿಗುವಂತಹ ಗಾಳಿಯು ನಮ್ಮೆಲ್ಲರಿಗೂ ಅತಿ ಅವಶ್ಯಕವಾಗಿದ್ದು, ಸಾಕಷ್ಟು ಗಿಡಮರಗಳನ್ನು ಬೆಳೆಸಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವಲ್ಲಿ ನಾವೆಲ್ಲರೂ ಕೈಜೋಡಿಸೋಣವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಶಾಲೆಯ ಶೈಕ್ಷಣಿಕ ಸಲಹೆಗಾರ  ಮಂಜಪ್ಪ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶೀಬಾರಾಣಿ,  ಪ್ರಭು ಪಿ.ವಿ., ಸವಿತಾ ಆರ್., ಶಾಲೆಯ ಶಿಕ್ಷಕ ವರ್ಗ  ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 

error: Content is protected !!