ಕರಾಟೆ ಪರೀಕ್ಷೆ ವಿಜೇತರಿಗೆ ಪ್ರಮಾಣಪತ್ರ

ಕರಾಟೆ ಪರೀಕ್ಷೆ ವಿಜೇತರಿಗೆ  ಪ್ರಮಾಣಪತ್ರ

ದಾವಣಗೆರೆ,ಜೂ.12- ವಿದ್ಯಾನಗರ ಪಾರ್ಕ್‌ನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಡ್ರಾಗನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಅಡಿಯಲ್ಲಿ ತರಬೇತಿ ನೀಡುತ್ತಿರುವ  ಕರಾಟೆ ಮಾಸ್ಟರ್ ಸಾಧಿಕ್ ಬಾಷಾ  ಅವರಿಂದ ತರಬೇತಿ ಪಡೆದ ಕರಾಟೆ ಪಟುಗಳಾದ ಎಂ.ಎಲ್.ಗಗನ್, ಕೆ.ಕೆ.ಚಂದು,   ಆರ್.ಎಚ್. ಸಂಜನಾ,  ಎಂ.ಪ್ರತಿಭಾ   ಇವರುಗಳು  ‘ಬ್ಲಾಕ್ ಬೆಲ್ಟ್’  ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ,  ಅಂತರರಾಷ್ಟ್ರೀಯ ಕೇಂದ್ರ ಸಂಸ್ಥೆಯಿಂದ  ಬ್ಲಾಕ್ ಬೆಲ್ಟ್ ಮತ್ತು ಸರ್ಟಿಫಿಕೆಟ್ ಪಡೆದಿದ್ದಾರೆ.

 ಈ ಕರಾಟೆ ಪಟುಗಳಿಗೆ  ವಿದ್ಯಾನಗರ ಪಾರ್ಕ್‌ನಲ್ಲಿ  ಹಿರಿಯ ಪತ್ರಕರ್ತ ಲೇಖಕ ಬಾ.ಮ. ಬಸವರಾಜಯ್ಯ ಹಾಗೂ ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ಬಿ. ದಿಳ್ಯಪ್ಪ ಅವರು ಸರ್ಟಿಫಿಕೇಟ್ ವಿತರಿಸಿ, ಅಭಿನಂದಿಸಿದರು.

error: Content is protected !!