ಬಸವ ತತ್ವ ಇಂದಿಗೂ ಎಂದೆಂದಿಗೂ ಪ್ರಸ್ತುತ

ಬಸವ ತತ್ವ ಇಂದಿಗೂ ಎಂದೆಂದಿಗೂ ಪ್ರಸ್ತುತ

ಶಿವಗೋಷ್ಠಿಯಲ್ಲಿ ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್

ದಾವಣಗೆರೆ, ಜೂ. 12- ಜಾತಿ, ಮತ, ಲಿಂಗ ಅಸಮಾನತೆಯ ವಿರುದ್ದ ಹೋರಾಡಿದ ಬಸವಣ್ಣನವರ ವಿಚಾರಧಾರೆಗಳು ಸಾರ್ವಕಾಲಿಕವಾದವು. ಬಸವ ತತ್ವವು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಅಧ್ಯಾಪಕ ಎಚ್. ಎಸ್. ದ್ಯಾಮೇಶ್ ಅಭಿಪ್ರಾಯಪಟ್ಟರು. 

ಶನಿವಾರ ಸಂಜೆ ಮಾಗನೂರು ಬಸಪ್ಪ ಶಾಲೆಯ ಸಭಾಂಗಣದಲ್ಲಿ ಜರುಗಿದ ಶಿವಗೋಷ್ಠಿಯಲ್ಲಿ  ಬಸವರಾಜ ಶಿವಪುರ ಅವರ ಸೇವಾ ಕಾರ್ಯಗಳ ಕುರಿತು ದ್ಯಾಮೇಶ್ ಮಾತನಾಡಿದರು. 

ಬಸವರಾಜ ಶಿವಪುರ ಅವರು ತರಳಬಾಳು ಮಠದ ಪೂಜ್ಯರ  ಬಸವ ತತ್ವ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ  ತೊಡಗಿಸಿಕೊಂಡಿದ್ದ ನಿಷ್ಟಾವಂತರು. ಅವರ ಬದ್ದತೆ, ಪ್ರಾಮಾಣಿಕತೆ, ಸೇವಾಮನೋಭಾವ ಅನುಕರಣೀಯ ವಾದುದು  ಎಂದು ದ್ಯಾಮೇಶ್ ತಿಳಿಸಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಎಚ್. ವಿ. ವಾಮದೇವಪ್ಪ ಮಾತನಾಡಿ, ಬಸವರಾಜ ಶಿವಪುರ ಅವರು ಕರಡು ತಿದ್ದುವುದರಲ್ಲಿ ನಿಪು ಣರಾಗಿದ್ದರು. ಸಿರಿಗೆರೆ ಮಠದಿಂದ ಪ್ರಕಟ ವಾಗುವ ಪುಸ್ತಕಗಳಲ್ಲಿ ಮುದ್ರಣ ದೋಷ ಗಳಾಗದಂತೆ ನಿಗಾ ವಹಿಸುತ್ತಿದ್ದರು. ಅವರ ಶ್ರದ್ಧೆ ಇಂದಿನ ಜನಕ್ಕೆ ಆದರ್ಶ ಎಂದರು.

ಗೋಷ್ಠಿಯಲ್ಲಿ ಪ್ರಾಚೀನ ನಾಯನ್ಮಾರರನ್ಮು ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕರಿಬಸಪ್ಪ ಚವಲಹಳ್ಳಿಯವರು  ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಾಗನೂರು ಸಂಗಮೇಶ ಗೌಡರು ಮಾತನಾಡಿ, ಪ್ರತಿ ತಿಂಗಳು ನಡೆಯುವ ಗೋಷ್ಠಿಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಬಹಿಸುವಂತಾಗಬೇಕು. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಆಧ್ಯಾತ್ಮಿಕ ಚಿಂತನೆ ಎಲ್ಲರಿಗೂ ಅವಶ್ಯಕ ಎಂದರು.

 ಪ್ರಾರಂಭದಲ್ಲಿ ಕದಳಿ ವೇದಿಕೆಯವರು ವಚನ ಗೀತೆ ಹಾಡಿದರು.  ಶಿಕ್ಷಕ ಮಂಜುನಾಥ್ ಸ್ವಾಗತಿಸಿದರು. ಶಿಕ್ಷಕಿ ಅನಿತಾ ವಂದನೆ ಸಲ್ಲಿಸಿದರು. ಶಿಕ್ಷಕಿ ಪುಷ್ಪಾವತಿ ನಿರೂಪಿಸಿದರು. ಕಾರ್ಯಕ್ರಮದ ಲ್ಲಿ  ನಿವೃತ್ತ ಪ್ರಾಚಾರ್ಯರುಗಳಾದ ಡಾ. ನಾ. ಲೋಕೇಶ ಒಡೆಯರ್,  ಪ್ರೊ. ಎಚ್. ಎಸ್. ಶಾಂತವೀರಪ್ಪ, ಅಧ್ಯಾಪಕ ನಾಗರಾಜ ಸಿರಿಗೆರೆ, ನಾಗಪ್ಪ ಕ್ಯಾರಕಟ್ಟೆ ಮುಂತಾದವರು ಪಾಲ್ಗೊಂಡಿದ್ದರು.

error: Content is protected !!