ಯೋಗ ಆರೋಗ್ಯಕ್ಕೆ, ಮಾನವೀಯ ಮೌಲ್ಯಗಳಿಗೆ ಪೂರಕ

ಯೋಗ ಆರೋಗ್ಯಕ್ಕೆ, ಮಾನವೀಯ ಮೌಲ್ಯಗಳಿಗೆ ಪೂರಕ

ದಾವಣಗೆರೆ, ಜೂ.12- ಯೋಗಾಸನ ಕೇವಲ ಆರೋಗ್ಯಕ್ಕೆ ಸೀಮಿತವಾಗದೆ, ನಮ್ಮ ಜೀವನದ ಅಭಿವೃದ್ಧಿಗೆ, ಮಾನವೀಯ ಮೌಲ್ಯಗಳಿಗೆ ಪೂರಕವಾಗುತ್ತದೆ. ಇಂದಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಸಭ್ಯತೆಗಳು ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮರೆಯಾಗುತ್ತಿರುವುದು ವಿಷಾದದ ಸಂಗತಿ. ನಮ್ಮ ಸಂಸ್ಕೃತಿಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ, ಕ್ರಿಯಾಶೀಲವಾಗಿ ಚಟುವಟಿಕೆಗಳ ಸಾಧನೆಯ ಈ ಕಲಾಕುಂಚ ಸಂಸ್ಥೆಯ ಕಾಯಕ ಇತರೆ ಸಂಸ್ಥೆಗಳಿಗೆ ಮಾದರಿ ಮತ್ತು ಶ್ಲ್ಯಾಘನೀಯ ಕಾರ್ಯ ಎಂದು ಶ್ರೀ ಪತಂಜಲಿ ಯೋಗ ಉಪಾಧ್ಯಕ್ಷ ಎಸ್.ಹೆಚ್. ಕಲ್ಲೇಶ್ ತಮ್ಮ ಮನದಾಳದ ಮಾತು ಹಂಚಿಕೊಂಡರು.

ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆ ಶಾಖೆಯ ಆಶ್ರಯದಲ್ಲಿ ಸಿದ್ಧವೀರಪ್ಪ ಬಡಾವಣೆಯ ಶ್ರೀ ಗಣೇಶ ನಿಲಯ ಸಭಾಂಗಣದಲ್ಲಿ ನಿನ್ನೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಉಚಿತ ಯೋಗ ತರಬೇತಿ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಅವರು ಉದ್ಘಾಟಿಸಿ, ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ  ಶ್ರೀ ಪತಂಜಲಿ ಯೋಗ ಸಮಿತಿಯ ಸಂಚಾಲಕ ಟಿ.ವಿ.ವಿ. ಸತೀಶ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿದರು. 

ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್   ಅಧ್ಯಕ್ಷತೆ ವಹಿಸಿದ್ದರು.

ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಸುಚಿತ್ರಾ ಗಣೇಶ್‍ರಾವ್, ಉಮಾ ನಾಗರಾಜ್ ತಂಡದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಶ್ರೀಮತಿ ಉಮಾ ಮಹೇಶ್ವರಿ ಸ್ವಾಗತಿಸಿದರು, ಯೋಗ ತರಬೇತಿ ಪಟುಗಳಾದ ಶ್ರೀಮತಿ ಲೀಲಾ ಸುಭಾಷ್, ಸಂಧ್ಯಾ ಶ್ರೀನಿವಾಸ್ ಉಪಸ್ಥಿತರಿದ್ದರು. ಶ್ರೀಮತಿ ಮಮತ ಕೊಟ್ರೇಶ್  ನಿರೂಪಿಸಿದರು. ಶ್ರೀಮತಿ ಸುಮಾ ಏಕಾಂತಪ್ಪ ವಂದಿಸಿದರು.

error: Content is protected !!